×
Ad

ಕ್ರಿಸ್ಮಸ್ ಹಬ್ಬದ ದಿನ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ

Update: 2025-12-25 12:47 IST

ಸಾಂದರ್ಭಿಕ ಚಿತ್ರ

ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ಚಿನ್ನದ ಬೆಲೆ ವಿಪರೀತವಾಗಿ ಏರಿಕೆಯಾಗುತ್ತದೆ ಎನ್ನುವ ಆತಂಕವಿರುತ್ತದೆ. ಆದರೆ ಈ ಬಾರಿ ಕ್ರಿಸ್ಮಸ್ ಹಬ್ಬದ ದಿನ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಸ್ಥಿರವಾಗಿದೆ. ಕ್ರಿಸ್ಮಸ್ ಪ್ರಯುಕ್ತ ಮಾರುಕಟ್ಟೆಗಳು ಮುಚ್ಚಿರುವುದರಿಂದ ಚಿನ್ನದ ಬೆಲೆಯಲ್ಲಿ ವಿಪರೀತ ಏರಿಕೆ ಕಂಡುಬಂದಿಲ್ಲ.

ಬುಧವಾರ ಗ್ರಾಮ್‌ ಗೆ 30 ರೂ. ಏರಿದ್ದ ಚಿನ್ನದ ಬೆಲೆ ಗುರುವಾರ ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಬುಧವಾರ ಗ್ರಾಮ್ಗೆ 10 ರೂ. ಜಿಗಿದಿತ್ತು. ಗುರುವಾರ ಬೆಳಗಿನ ವಹಿವಾಟಿನಲ್ಲಿ ಗ್ರಾಮ್‌ ಗೆ ಒಂದು ರೂ. ಹೆಚ್ಚಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿದೆ. ಮುಂದಿನ ವರ್ಷ ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿರುವ ಕಾರಣ ಖರೀದಿದಾರರು ಈಗಲೇ ಚಿನ್ನ ಖರೀದಿಸಿದರೆ ಉತ್ತಮ.

ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,27,650 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,39,250 ರೂ. ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,400 ರೂ. ಇದೆ.

ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು?

ಗುರುವಾರ ಡಿಸೆಂಬರ್ 25ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,925 (+32) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,765 (+30) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,444 (+24) ರೂ. ಬೆಲೆಗೆ ತಲುಪಿದೆ.

ಬೆಂಗಳೂರಿನಲ್ಲಿ ಚಿನ್ನ- ಬೆಳ್ಳಿ ಬೆಲೆ

24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 1,38,940 ರೂ., 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,27,360 ರೂ.

1 ಕೆಜಿ ಬೆಳ್ಳಿ ಬೆಲೆ 1,90,100 ರೂ.

ಕರ್ನಾಟಕದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ

24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) 13,894 ರೂ., 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 12,736 ರೂ., 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10,421 ರೂ.

ವಿವಿಧ ನಗರಗಳಲ್ಲಿ 22 ಕ್ಯಾರಟ್ ನ 1 ಗ್ರಾಂ ಚಿನ್ನದ ಬೆಲೆ

ಚೆನ್ನೈ 12,801 ರೂ.

ಮುಂಬೈ 12,736 ರೂ.

ದೆಹಲಿ 12,751 ರೂ.

ಕೋಲ್ಕತ್ತಾ 12,736 ರೂ.

ಬೆಂಗಳೂರು 12,736 ರೂ.

ಹೈದರಾಬಾದ್ 12,736 ರೂ.

ಕೇರಳ 12,736 ರೂ.

ಪುಣೆ 12,736 ರೂ.

ವಡೋದರಾ 12,741 ರೂ.

ಅಹಮದಾಬಾದ್ 12,741 ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News