ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ | ಪ್ರತ್ಯಕ್ಷದರ್ಶಿ ಹೇಳಿದ್ದೇನು?
Update: 2026-01-28 11:51 IST
Photo credit: PTI
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿದ್ದ ವಿಮಾನವು ರನ್‌ವೇಯಿಂದ ಸುಮಾರು 100 ಅಡಿ ದೂರದಲ್ಲಿ ಪತನಗೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
"ವಿಮಾನವು ಇಳಿಯುವಾಗ, ಅದು ಪತನಗೊಳ್ಳುವಂತೆ ಕಂಡಿತು ಹಾಗೂ ಹಾಗೆಯೇ ಆಯಿತು. ನಂತರ ಸ್ಫೋಟಗೊಂಡು, ಅದರ ಬೆನ್ನಿಗೇ ನಾಲ್ಕೈದು ಸ್ಫೋಟಗಳು ಸಂಭವಿಸಿದವು" ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ವಿಮಾನವು ಪತನಗೊಂಡು, ಬೆಂಕಿಯ ಜ್ವಾಲೆಗಳು ಹಬ್ಬುತ್ತಿದ್ದಂತೆಯೇ ಜನರು ಅದರತ್ತ ಧಾವಿಸಿದರು. ಜನರು ವಿಮಾನದಲ್ಲಿದ್ದವರನ್ನು ಹೊರಗೆಳೆದು ರಕ್ಷಿಸಲು ಪ್ರಯತ್ನಿಸಿದರು. ಆದರೆ, ಭಾರಿ ಬೆಂಕಿಯ ಕಾರಣಕ್ಕೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ ಎಂದು NDTV ವರದಿ ಮಾಡಿದೆ.