15,000 ರೂ. ದಾಟಿದ 22 ಕ್ಯಾರೆಟ್; ಇಂದಿನ ಚಿನ್ನದ ದರವೆಷ್ಟು?
ಸಾಂದರ್ಭಿಕ ಚಿತ್ರ (AI)
ಜಾಗತಿಕ ಬೇಡಿಕೆ ಮತ್ತು ಹೂಡಿಕೆದಾರರು ಸುಭದ್ರ ಹೂಡಿಕೆಯತ್ತ ಮುಖ ಮಾಡಿರುವ ಚಿಂತನೆಗಳ ಪರಿಣಾಮವಾಗಿ ಚಿನ್ನದ ದರ ದಿನೇದಿನೆ ಏರುತ್ತಲೇ ಇದೆ.
ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರುತ್ತಲೇ ಹೋಗುತ್ತಿದೆ. ಇದೀಗ ಆಭರಣ ಚಿನ್ನವೂ 15 ಸಾವಿರದ ಗಡಿ ದಾಟಿದೆ. ಇಂದು ದೇಶದಲ್ಲಿ 1 ಗ್ರಾಂ ಆಭರಣ ಚಿನ್ನದ ಬೆಲೆ 15,140 ರೂ. ಆಗಿದೆ. ಮಂಗಳವಾರ ಇದರ ಬೆಲೆ 14,845 ರೂ. ರಲ್ಲಿ ಕೊನೆಗೊಂಡಿತ್ತು. ಒಟ್ಟಿನಲ್ಲಿ ಇಂದು ಆಭರಣ ಚಿನ್ನದ ಬೆಲೆ 295 ರೂ. ಏರಿಕೆಯಾಗಿ 15 ಸಾವಿರದ ಗಡಿ ದಾಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಶೇ 1.1ರಷ್ಟು ಏರಿಕೆಯೊಂದಿಗೆ ಪ್ರತಿ ಒನ್ಸ್ 5,243.58 ಡಾಲರ್ ಗೆ ತಲುಪಿದೆ. ದಿನದ ಆರಂಭದಲ್ಲಿ ಇದು 5,247.21 ಡಾಲರ್ ನಷ್ಟು ದಾಖಲೆ ಮಟ್ಟವನ್ನೂ ತಲುಪಿತ್ತು. ಈ ವರ್ಷದ ಆರಂಭದಿಂದಲೂ ಚಿನ್ನದ ಬೆಲೆ ಶೇ 20 ಕ್ಕಿಂತ ಹೆಚ್ಚು ಏರಿಕೆಯಾಗಿದೆ, ಇದು ಜಾಗತಿಕ ಬೇಡಿಕೆ ಮತ್ತು ಹೂಡಿಕೆದಾರರು ಸುಭದ್ರ ಹೂಡಿಕೆಯತ್ತ ಮುಖ ಮಾಡಿರುವ ಚಿಂತನೆಗಳ ಪರಿಣಾಮವಾಗಿದೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಬುಧವಾರ ಜನವರಿ 28ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,517 (+322) ರೂ. ಗೆ ಏರಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,140 (+295) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,388 (+242) ರೂ. ಬೆಲೆಗೆ ತಲುಪಿದೆ.
ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ
ಬುಧವಾರ ಬೆಂಗಳೂರಿನಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 16,517 ರೂ. ಆಗಿದೆ. ನಿನ್ನೆ ಇದೇ ಚಿನ್ನದ ದರ 16,195 ರೂ. ಇತ್ತು. ಹೀಗಾಗಿ ಇಂದಿನ ದಿನದಲ್ಲಿ 1 ಗ್ರಾಂಗೆ 322 ರೂ. ಏರಿಕೆ ಕಂಡುಬಂದಿದೆ. 22 ಕ್ಯಾರೆಟ್ ಚಿನ್ನದ ಇಂದಿನ 1 ಗ್ರಾಂ ಬೆಲೆ 15,140 ರೂ. ಆಗಿದೆ. ನಿನ್ನೆ ಇದರ ಬೆಲೆ 14,845 ರೂ. ಇತ್ತು. ಇಂದಿನ ದಿನದಲ್ಲಿ 1 ಗ್ರಾಂಗೆ 295 ರೂ. ಏರಿಕೆಯಾಗಿದೆ. ಬುಧವಾರ 1 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 12,388 ರೂ. ಆಗಿದ್ದು, ನಿನ್ನೆ ಇದರ ದರ 12,146 ರೂ. ಇತ್ತು. ಇದರಿಂದ ಇಂದಿನ ಏರಿಕೆ 242 ರೂ. ಆಗಿದೆ.
ಬೆಳ್ಳಿಯ ಬೆಲೆಯಲ್ಲೂ ಏರಿಕೆ
ಬೆಂಗಳೂರು ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಗಳಲ್ಲಿ ಇಂದು ಸ್ವಲ್ಪ ಏರಿಕೆ ಕಂಡುಬಂದಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು 380 ರೂ. ಆಗಿದ್ದು, ನಿನ್ನೆ 370 ರೂ. ಇತ್ತು. ಹೀಗಾಗಿ ಎಲ್ಲೆಡೆ ಸಣ್ಣದಾದರೂ ಏರಿಕೆ ಕಂಡುಬಂದಿದ್ದು, 1 ಗ್ರಾಂಗೆ 10 ರೂ. ಏರಿಕೆಯಾಗಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ ಹೇಗಿದೆ?
ದಿಲ್ಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 16,530 (+320) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,155 (+295) ರೂ. ಇದೆ.
ಮುಂಬೈ 24 ಕ್ಯಾರೆಟ್ ಚಿನ್ನದ ದರ 16,517 (+ 322) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,140 (+295) ರೂ. ಇದೆ.
ಅಹಮದಾಬಾದ್ 24 ಕ್ಯಾರೆಟ್ ಚಿನ್ನದ ದರ 16,520 (+320) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,145 (+ 295) ರೂ. ಇದೆ.
ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ದರ 16,734 (+414) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,330 (+ 370) ರೂ. ಇದೆ.
ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ದರ 16,517 (+ 322) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,140 (+295) ರೂ. ಇದೆ.
ಹೈದರಾಬಾದ್ ನಲ್ಲಿ 24 ಕ್ಯಾರೆಟ್ ಚಿನ್ನದ ದರ 16,517 (+ 322) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,140 (+295) ರೂ. ಇದೆ.
ಜೈಪುರದಲ್ಲಿ 24 ಕ್ಯಾರೆಟ್ ಚಿನ್ನದ ದರ 16,530 (+320) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,155 (+295) ರೂ. ಇದೆ.
ಭೋಪಾಲ್ ನಲ್ಲಿ 24 ಕ್ಯಾರೆಟ್ ಚಿನ್ನದ ದರ 16,520 (+320) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,145 (+ 295) ರೂ. ಇದೆ.
ಲಖನೌಲ್ಲಿ 24 ಕ್ಯಾರೆಟ್ ಚಿನ್ನದ ದರ 16,530 (+320) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,155 (+295) ರೂ. ಇದೆ.
ಚಂಡೀಗಢದಲ್ಲಿ 24 ಕ್ಯಾರೆಟ್ ಚಿನ್ನದ ದರ 16,530 (+320) ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ದರ 15,155 (+295) ರೂ. ಇದೆ.