×
Ad

ಅಸ್ಸಾಂ: ಮದರಸಾ ಹಾಸ್ಟೆಲ್‌ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆ

Update: 2023-08-14 19:29 IST

Photo Credit : assamtribune.com

ಗುವಾಹಟಿ: ಅಸ್ಸಾಂನ ಮದರಸಾದ ಹಾಸ್ಟೆಲ್‌ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ 12 ವರ್ಷದ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿದೆ ಎಂದು PTI ವರದಿ ಮಾಡಿದೆ.

ಘಟನೆ ವರದಿಯಾದ ಕೂಡಲೇ ಮದರಸಾದ ಸುತ್ತ ಸಾವಿರಾರು ಸ್ಥಳೀಯರು ಜಮಾಯಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ ಊಟ ಮುಗಿಸಿ ಬಾಲಕ ಮಲಗಿದ್ದ, ಬೆಳಗ್ಗೆ ನಮಾಝ್‌ ನಿರ್ವಹಿಸಲು ಮದರಸಾ ಅಧ್ಯಾಪಕರು ವಿದ್ಯಾರ್ಥಿಗಳನ್ನು ಕರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಹೆಚ್ಚಿನ ತನಿಖೆಗಾಗಿ ಮದರಸಾವನ್ನು ಜಿಲ್ಲಾಡಳಿತ ಸೀಲ್ ಮಾಡಿದೆ ಎಂದು ವರದಿಯಾಗಿದೆ.

ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಪ್ರತಿಕ್ರಿಯಿಸಿದ ಚಚರ್ ಎಸ್ಪಿ ನುಮಲ್ ಮಹತ್ತಾ, "ಇದೊಂದು ದುರದೃಷ್ಟಕರ ಘಟನೆ, ನಾವು ಮೃತ ಬಾಲಕನ ಮೃತದೇಹವನ್ನು ವಶಪಡಿಸಿಕೊಂಡಿದ್ದೇವೆ. ಮೃತ ಬಾಲಕನಿಗೆ ಸುಮಾರು 11-12 ವರ್ಷ ಪ್ರಾಯ ಇರಬಹುದು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಈಗಾಗಲೇ ಕೆಲವು ಜನರನ್ನು ವಿಚಾರಣೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಲಾಗುವುದು” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News