×
Ad

ಸೇನಾಧಿಕಾರಿಗಳಿಗೆ ಹಲ್ಲೆ | 6 ಮಂದಿ ಆರೋಪಿಗಳ ಬಂಧನ

Update: 2024-09-14 21:11 IST

   ಸಾಂದರ್ಭಿಕ ಚಿತ್ರ |  PTI 

ಭೋಪಾಲ : ಇಂದೋರ್ ಸಮೀಪ ಇಬ್ಬರು ಯುವ ಸೇನಾಧಿಕಾರಿಗಳಿಗೆ ಹಲ್ಲೆ ನಡೆಸಿದ, ಲೂಟಿಗೈದ ಹಾಗೂ ಅವರ ಒಬ್ಬರು ಗೆಳತಿಯ ಅತ್ಯಾಚಾರ ಎಸಗಿದ ಆರೋಪದಲ್ಲಿ ಎಲ್ಲಾ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಮೂರನೇ ಆರೋಪಿಯನ್ನು ಬಂಧಿಸಿದ 24 ಗಂಟೆಗಳ ಒಳಗೆ ಇತರ ಮೂವರು ಆರೋಪಿಗಳನ್ನು ಕೂಡ ಶುಕ್ರವಾರ ಬಂಧಿಸಲಾಗಿದೆ. ಇವರ ಬಂಧನಕ್ಕೆ ತಲಾ 10 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು.

ಶುಕ್ರವಾರ ಬಂಧಿಸಲಾದ ಮೂವರು ಆರೋಪಿಗಳ ವಯಸ್ಸು 18ರಿಂದ 25ರ ನಡುವೆ ಇದೆ. ಪ್ರಧಾನ ಆರೋಪಿ ಸೇರಿದಂತೆ ಇತರ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ.

ಇಲ್ಲಿನ ನಿರ್ಜನ ಪ್ರದೇಶದಲ್ಲಿ ಬುಧವಾರ ಮುಂಜಾನೆ ಸುಮಾರು 1.30ರ ಹೊತ್ತಿಗೆ ಇಬ್ಬರು ಸೇನಾಧಿಕಾರಿಗಳು ಹಾಗೂ ಅವರ ಇಬ್ಬರು ಗೆಳತಿಯರು ಇರುವುದನ್ನು ಪ್ರಧಾನ ಆರೋಪಿ ಗಮನಿಸಿ ನಮಗೆ ಮಾಹಿತಿ ನೀಡಿದ ಎಂದು ಆರೋಪಿಗಳಲ್ಲಿ ಓರ್ವ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ ಮಾಹಿತಿ ನೀಡಿದ ಒಂದು ಗಂಟೆಗಳ ಬಳಿಕ ಎಲ್ಲಾ ಆರು ಮಂದಿ ಅಲ್ಲಿಗೆ ಆಗಮಿಸಿದರು. ಅವರ ಮೇಲೆ ದಾಳಿ ನಡೆಸಿದರು ಹಾಗೂ ನಾಲ್ವರನ್ನು ಲೂಟಿಗೈದರು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News