×
Ad

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Update: 2026-01-28 15:28 IST

Screengrab: X/@PTI_News

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಬೆಂಕಿಗೆ ಆಹುತಿಯಾಗುವ ಮೊದಲು ಆಕಾಶದಿಂದ ಕೆಳಗೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ರಸ್ತೆಬದಿಯ ಕ್ಯಾಮೆರಾದಲ್ಲಿ ವಿಮಾನ ಕೆಳಗೆ ಬೀಳುವುದು ಮತ್ತು ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಹಠಾತ್ ಬೆಂಕಿ ಕಾಣಿಸುಕೊಂಡು ಬೆಂಕಿಯ ಜ್ವಾಲೆ ಮೇಲೇರುವುದು, ದಟ್ಟವಾದ ಕಪ್ಪು ಹೊಗೆಯು ಸುತ್ತಮುತ್ತಲಿನ ಪ್ರದೇಶವನ್ನು ತ್ವರಿತವಾಗಿ ಆವರಿಸುವುದು ಕಂಡು ಬಂದಿದೆ.

ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಲ್ಯಾಂಡಿಂಗ್‌ಗೆ ಪ್ರಯತ್ನಿಸುತ್ತಿದ್ದಾಗ ವಿಮಾನ ಪತನವಾಗಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News