'4PM ನ್ಯೂಸ್' ಯೂಟ್ಯೂಬ್ ವಾಹಿನಿ ವಿರುದ್ಧದ ನಿರ್ಬಂಧ ಹಿಂಪಡೆಯಲಾಗಿದೆ : ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ
Update: 2025-05-13 13:44 IST
ಹೊಸದಿಲ್ಲಿ : '4PM ನ್ಯೂಸ್' ಯೂಟ್ಯೂಬ್ ವಾಹಿನಿ ವಿರುದ್ಧದ ನಿರ್ಬಂಧದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
4PM ನ್ಯೂಸ್ ವಾಹಿನಿಯ ಸಂಪಾದಕ ಸಂಜಯ್ ಶರ್ಮಾ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್, ಚಾನೆಲ್ ಅನ್ನು ಈಗ ನಿರ್ಬಂಧಿಸಲಾಗಿದೆ ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರ ಪೀಠಕ್ಕೆ ತಿಳಿಸಿದ್ದರು.
ನಿರ್ಬಂಧದ ಆದೇಶವನ್ನು ಪ್ರಶ್ನಿಸಿ ಸಂಜಯ್ ಶರ್ಮಾ ಸಲ್ಲಿಸಿದ ಅರ್ಜಿ ಹಿನ್ನೆಲೆ ಸುಪ್ರೀಂ ಕೋರ್ಟ್ ಪೀಠವು ಕೇಂದ್ರ ಸರಕಾರ ಮತ್ತು ಯೂಟ್ಯೂಬ್‌ಗೆ ನೋಟಿಸ್ ನೀಡಿತ್ತು.
ಶರ್ಮಾ ಅವರು ಅರ್ಜಿಯಲ್ಲಿ ವಾಹಿನಿಯನ್ನು ನಿರ್ಬಂಧಿಸಿದ ಕ್ರಮವು ನಿರಂಕುಶ ಮತ್ತು ಅಸಾಂವಿಧಾನಿಕ ಎಂದು ವಾದಿಸಿದ್ದರು.