×
Ad

ಭಾರತಕ್ಕೆ ಶೇ.96ರಷ್ಟು ಇಯು ರಫ್ತುಗಳಿಗೆ ಸುಂಕ ಕಡಿತ ಕುರಿತು ಕಾಂಗ್ರೆಸ್ ಕಳವಳ

Update: 2026-01-28 21:30 IST

ಜೈರಾಮ್ ರಮೇಶ್ | Photo Credit ; PTI 

ಹೊಸದಿಲ್ಲಿ, ಜ.28: ಭಾರತ ಮತ್ತು ಐರೋಪ್ಯ ಒಕ್ಕೂಟ (ಇಯು) ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕುರಿತು ಕಾಂಗ್ರೆಸ್ ಬುಧವಾರ ಕಳವಳ ವ್ಯಕ್ತಪಡಿಸಿದೆ. ಭಾರತದ ಅಲ್ಯುಮಿನಿಯಂ ಮತ್ತು ಉಕ್ಕು ಉತ್ಪಾದಕರಿಗೆ ಕಾರ್ಬನ್ ಬಾರ್ಡರ್ ಹೊಂದಾಣಿಕೆ ಕಾರ್ಯವಿಧಾನದಿಂದ ವಿನಾಯಿತಿ ಪಡೆಯುವಲ್ಲಿ ವೈಫಲ್ಯ ಹಾಗೂ ಭಾರತಕ್ಕೆ ಶೇ.96ರಷ್ಟು ಇಯು ರಫ್ತುಗಳ ಮೇಲೆ ಸುಂಕ ಕಡಿತ ಅಥವಾ ವಿನಾಯಿತಿಯನ್ನು ಕಾಂಗ್ರೆಸ್ ಟೀಕಿಸಿದೆ.

ಭಾರತದಿಂದ ರಫ್ತುಗಳಿಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಐರೋಪ್ಯ ಒಕ್ಕೂಟದ ಕಟ್ಟುನಿಟ್ಟಿನ ಆರೋಗ್ಯ ಮತ್ತು ಉತ್ಪನ್ನ ಸುರಕ್ಷತಾ ನಿಯಮಗಳು ಎಫ್‌ಟಿಎ ಬಳಿಕವೂ ಮುಂದುವರಿಯುವ ಬಗ್ಗೆ ಹಾಗೂ ಇಯುಗೆ ಭಾರತದ ಅತಿದೊಡ್ಡ ರಫ್ತು ಆಗಿರುವ ಸಂಸ್ಕರಿತ ಇಂಧನದ ಕುರಿತೂ ಕಳವಳಗಳಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.

ಈ ಇಂಧನದ ಬಹುಪಾಲು ರಷ್ಯಾದಿಂದ ಆಮದಾಗಿದ್ದು, ಅಮೆರಿಕದ ಒತ್ತಡದ ನಡುವೆ ಈ ವ್ಯಾಪಾರ ಮಾರ್ಗಗಳ ಭವಿಷ್ಯದ ಕುರಿತು ಸ್ಪಷ್ಟತೆಯ ಅಗತ್ಯವಿದೆ ಎಂದರು.

ಭಾರೀ ಪ್ರಚಾರ ಪಡೆದಿರುವ ಎಫ್‌ಟಿಎ, ಭಾರತವು ತನ್ನ ಯಾವುದೇ ವ್ಯಾಪಾರ ಪಾಲುದಾರ ದೇಶಕ್ಕೆ ನೀಡಿರುವ ಅತ್ಯಂತ ದೊಡ್ಡ ವ್ಯಾಪಾರ ಅವಕಾಶವಾಗಿದೆ (ಭಾರತಕ್ಕೆ ಶೇ.96ರಷ್ಟು ಐರೋಪ್ಯ ರಫ್ತುಗಳ ಮೇಲೆ ಸುಂಕ ಕಡಿತ ಅಥವಾ ವಿನಾಯಿತಿ). ಇಯುಗೆ ಭಾರತದ ರಫ್ತುಗಳು ದ್ವಿಗುಣಗೊಳ್ಳುವ ನಿರೀಕ್ಷೆಯಿದ್ದು, ಭಾರತದ ವ್ಯಾಪಾರ ಕೊರತೆಯ ಮೇಲೆ ಇದರ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ರಮೇಶ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News