×
Ad

ಟ್ರಂಪ್ ಭೇಟಿಯನ್ನು ತಪ್ಪಿಸಲು ಅಸಿಯಾನ್‌ಗೆ ಹೋಗದ ಪ್ರಧಾನಿ ಮೋದಿ: ಕಾಂಗ್ರೆಸ್ ವ್ಯಂಗ್ಯ‌

Update: 2025-10-23 21:06 IST

ಡೊನಾಲ್ಡ್ ಟ್ರಂಪ್,  ಪ್ರಧಾನಿ ನರೇಂದ್ರ ಮೋದಿ | Photo Credit : PTI

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಮೂಲೆಗುಂಪಾಗುವುದನ್ನು ತಪ್ಪಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲವೆಂದು ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಉಸ್ತುವಾರಿ ಕಾರ್ಯದರ್ಶಿ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.

‘‘ಪ್ರಧಾನಿಯವರು ಸಾಮಾಜಿಕ ಜಾಲತಾಣಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಗುಣಗಾನ ಮಾಡುವ ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ, ತಾನು ಅಪರೇಶನ್ ಸಿಂಧೂರವನ್ನು ನಿಲ್ಲಿಸಿದ್ದಾಗಿ 53 ಸಲ ಹೇಳಿಕೊಂಡಿರುವ ಹಾಗೂ ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಭಾರತ ತನಗೆ ಐದು ಬಾರಿ ಭರವಸೆ ನೀಡಿದೆಯೆಂದು ಹೇಳಿಕೊಂಡ ಆ ವ್ಯಕ್ತಿಯೊಂದಿಗೆ ಮುಖತಃ ಭೇಟಿಯಾಗುವುದು ಅವರಿಗೆ ತುಂಬಾ ‘ಅಪಾಯಕಾರಿ’ ಎನಿಸಿದೆ’’ ಎಂದು ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಮೋದಿಯವರು ಶೃಂಗಸಭೆಗಾಗಿ ಕೌಲಾಲಂಪುರಕ್ಕೆ ಹೋಗುವರೇ ಅಥವಾ ಇಲ್ಲವೇ ಎಂಬ ಬಗ್ಗೆ ಸಂದೇಹಗಳಿದ್ದವು. ಆದರೆ ಇದೀಗ ಪ್ರಧಾನಿಯವರು ಹೋಗದಿರುವುದು ಖಚಿತವಾಗಿದೆ. ಅದರೆ ಜಾಗತಿಕ ನಾಯಕರನ್ನು ಅಲಂಗಿಸುವ ಹಾಗೂ ಫೋಟೋಸೆಶನ್‌ಗಳಲ್ಲಿ ಪಾಲ್ಗೊಳ್ಳುವ ಮತ್ತು ಸ್ವಘೋಷಿತ ವಿಶ್ವಗುರುವೆಂದು ತೋರಿಸಿಕೊಳ್ಳುವ ಹಲವು ಅವಕಾಶಗಳು ಅವರಿಗೆ ತಪ್ಪಿಹೋದಂತಾಗಿದೆ ಎಂದು ರಮೇಶ್ ಟೀಕಿಸಿದ್ದಾರೆ.

ಮೋದಿ ಅಸಿಯಾನ್ ಶೃಂಗಸಭೆಗೆ ಯಾಕೆ ಹೋಗುತ್ತಿಲ್ಲವೆಂಬುದಕ್ಕೆ ಉತ್ತರ ಸರಳವಾಗಿದೆ. ಅಲ್ಲಿ ಉಪಸ್ಥಿತರಿರುವ ಟ್ರಂಪ್ ಅವರಿಂದ ಮೂಲೆಗುಂಪಾಗುವುದನ್ನು ಅವರು ಬಯಸುವುದಿಲ್ಲ. ಕೆಲವು ವಾರಗಳ ಹಿಂದೆ ಈಜಿಪ್ಟ್‌ನಲ್ಲಿ ನಡೆಯುವ ಗಾಝಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನೀಡಿದ್ದ ಆಹ್ವಾನವನ್ನು ಕೂಡಾ ಮೋದಿಯವರು ಇದೇ ಕಾರಣಕ್ಕಾಗಿ ತಿರಸ್ಕರಿಸಿದ್ದರು’’ ಎಂದು ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News