×
Ad

ಆದಾಯ ತೆರಿಗೆ ಮರು ಮೌಲ್ಯಮಾಪನದ ವಿರುದ್ಧ ಕಾಂಗ್ರೆಸ್ ಅರ್ಜಿ | ದಿಲ್ಲಿ ಹೈಕೋರ್ಟ್ ನಿಂದ ವಜಾ

Update: 2024-03-28 22:13 IST

ದಿಲ್ಲಿ ಹೈಕೋರ್ಟ್ | Photo: PTI 

ಹೊಸದಿಲ್ಲಿ : ಆದಾಯ ತೆರಿಗೆ ಅಧಿಕಾರಿಗಳಿಂದ ನಾಲ್ಕು ವರ್ಷಗಳ ಅವಧಿಗೆ ತನ್ನ ವಿರುದ್ಧ ಆದಾಯ ತೆರಿಗೆ ಮರುಮೌಲ್ಯಮಾಪನ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಛ ನ್ಯಾಯಾಲಯವು ಗುರುವಾರ ವಜಾಗೊಳಿಸಿದೆ.

2024-15 ಮತ್ತು 2015-16ನೇ ವಿತ್ತವರ್ಷಗಳಿಗೆ ತೆರಿಗೆ ಮರುಮೌಲ್ಯಮಾಪನದಲ್ಲಿ ಹಸ್ತಕ್ಷೇಪವನ್ನು ನಿರಾಕರಿಸಿದ್ದ ತನ್ನ ಹಿಂದಿನ ಆದೇಶಕ್ಕೆ ಅನುಗುಣವಾಗಿ ಉಚ್ಛ ನ್ಯಾಯಾಲಯವು ಕಾಂಗ್ರೆಸ್ನ ಅರ್ಜಿಯನ್ನು ವಜಾಗೊಳಿಸಿತು. ಈ ಅರ್ಜಿ 2017ರಿಂದ 2021ರವರೆಗಿನ ಅವಧಿಗೆ ತೆರಿಗೆ ಮರುಮೌಲ್ಯಮಾಪನ ಕ್ರಮವನ್ನು ಪ್ರಶ್ನಿಸಿತ್ತು.

2014-15 ಮತ್ತು 2015-16ನೇ ವಿತ್ತವರ್ಷಗಳಿಗೆ ತೆರಿಗೆ ಮರುಮೌಲ್ಯಮಾಪನವನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ನ ಅರ್ಜಿಯನ್ನು ಉಚ್ಛ ನ್ಯಾಯಾಲಯವು ಕಳೆದ ವಾರ ವಜಾಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News