×
Ad

ದಿಲ್ಲಿಯ ಫ್ಲ್ಯಾಟ್‌ ನ ಬೆಡ್‌ ಬಾಕ್ಸ್‌ನಲ್ಲಿ ಮಹಿಳೆಯ ಶವ ಪತ್ತೆ

Update: 2025-03-29 21:43 IST

PHOTO : HT 

ಹೊಸದಿಲ್ಲಿ: ದಿಲ್ಲಿಯ ಫ್ಲ್ಯಾಟ್ ಒಂದರಲ್ಲಿ ಹಾಸಿಗೆ ಪೆಟ್ಟಿಗೆ(ಬೆಡ್‌ ಬಾಕ್ಸ್)ಯೊಳಗೆ ಮಹಿಳೆಯೊಬ್ಬಳ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಇದೊಂದು ಕೊಲೆ ಪ್ರಕರಣವೆಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಪಂಜಾಬ್ ಮೂಲದ ಅಂಜು ಯಾನೆ ಅಂಜಲಿ ಎಂದು ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಆಕೆಯ ಹೆತ್ತವರನ್ನು ಸಂಪರ್ಕಿಸಲಾಗಿದೆಯೆಂದು ಪೊಲೀಸರು ಹೇಳಿದಾದರೆ.

ಶುಕ್ರವಾರದಂದು ಮಹಿಳೆಯ ಮೃತದೇಹವು ಕೊಳತೆ ಸ್ಥಿತಿಯಲ್ಲಿ ದಿಲ್ಲಿಯ ಶಹಾದ್ರಾ ಪ್ರದೇಶದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಒಂದರ ಬೆಡ್‌ ಬಾಕ್ಸ್‌ನಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಬ್ಲ್ಯಾಂಕೆಟ್‌ ನಿಂದ ಸುತ್ತಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮನೆಯ ಮಾಲಕ ವಿವೇಕಾನಂದ ಮಿಶ್ರಾ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಯುವತಿಯ ಹೆತ್ತವರು ಕಡುಬಡವರಾಗಿದ್ದು, ಮೃತಳ ಗುರುತನ್ನು ದೃಢೀಕರಿಸುವುದಕ್ಕಾಗಿ ಅವರನ್ನು ದಿಲ್ಲಿಗೆ ಕರೆತರಲು ಪೊಲೀಸ್ ತಂಡವೊಂದನ್ನು ಲುಧಿಯಾನಾಕ್ಕೆ ಕಳುಹಿಸಲಾಗಿದೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಿಳೆಯು ವಿವಾಹಿತಳಾಗಿದ್ದು, ಬಿಹಾರದಲ್ಲಿರುವ ಪತಿಯನ್ನು ತೊರೆದು ಆಕೆ ಪ್ರತ್ಯೇಕವಾಗಿ ದಿಲ್ಲಿಯಲ್ಲಿ ವಾಸವಾಗಿದ್ದಳು. ತನ್ನ ತಂದೆತಾಯಿಗಳ ಜೊತೆಗೂ ಆಕೆ ಸಂಪರ್ಕದಲ್ಲಿರಲಿಲ್ಲವೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮನೆ ಮಾಲಕ, 55-60 ವರ್ಷ ವಯಸ್ಸಿನ ಮಿಶ್ರಾನನ್ನು ಶುಕ್ರವಾರ ಬಂಧಿಸಲಾಗಿದ್ದು, ಆತನನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವು ಪತ್ತೆಯಾದ ಫ್ಲ್ಯಾಟ್‌ನ ಮನೆಯನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು. ರಕ್ತದ ಕಲೆಗಳು ಕೂಡಾ ಹಿಂಬಾಗಿಲಿನಲ್ಲಿ ಕಂಡುಬಂದಿದೆ ಎಂದು ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಗೌತಮ್ ಹೇಳಿಕೆಯೊಂದರಲ್ಲಿ ತಕಿಳಿಸಿದ್ದಾರೆ.

ಎರಡು ಮೂರು ದಿನಗಳ ಹಿಂದೆ ಕೊಲೆ ನಡೆದಿರುವ ಸಾಧ್ಯತೆಯಿದೆಯೆಂದು ಹಿರಿಯ ಪೊಲೀಸ್‌ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ವಿವೇಕಾನಂದ ಮಿಶ್ರಾ ಗುರುವಾರ ರಾತ್ರಿ ಹಾಗೂ ಶುಕ್ರವಾರ ಮಧ್ಯಾಹ್ನ ಫ್ಲ್ಯಾಟ್‌ಗೆ ಆಗಮಿಸಿರುವುದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದುಬಂದಿದೆಯೆಂದು ಮೂಲಗಳು ತಿಳಿಸಿವೆ.

ಫಾರೆನ್ಸಿಕ್‌ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News