×
Ad

ದಿಲ್ಲಿ| ಉದ್ಯಮಿಯನ್ನು ಥಳಿಸಿ ಹತ್ಯೆ ಮಾಡಿದ ಫುಡ್ ಡೆಲಿವರಿ ಬಾಯ್‌ಗಳು

Update: 2026-02-03 22:32 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಫೆ. 3: ದಿಲ್ಲಿಯ ಕನ್ನಾಟ್ಪ್ಲೇಸ್‌ನಲ್ಲಿ ಮೂವರು ಆಹಾರ ವಿತರಣೆ ಕಂಪೆನಿಯ ಡೆಲಿವರಿಬಾಯ್‌ಗಳು 36 ವರ್ಷದ ಉದ್ಯಮಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯು ಜನವರಿ 3ರ ರಾತ್ರಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತ ಶಿವಮ್ ಗುಪ್ತ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸಿ ಜನವರಿ 19ರಂದು ಕೊನೆಯುಸಿರೆಳೆದಿದ್ದಾರೆ.

ಗುಪ್ತ ಪಾರ್ಟಿಯೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಗುಪ್ತ ಮತ್ತು ಮೂವರು ಆಕ್ರಮಣಕಾರಿಗಳ ನಡುವೆ ವಾದ-ವಿವಾದ ತಲೆದೋರಿದ ಬಳಿಕ ಅವರು ಹೆಲ್ಮೆಟ್‌ಗಳಿಂದ ಗುಪ್ತರ ತಲೆಗೆ ಹೊಡೆದರು ಎಂದು ಪೊಲೀಸರು ಹೇಳಿದ್ದಾರೆ. ಬಳಿಕ ದುಷ್ಕರ್ಮಿಗಳು ಪಾದಚಾರಿ ಮಾರ್ಗದಲ್ಲಿ ಉದ್ಯಮಿಯನ್ನು ಬಿಟ್ಟು ಹೋಗಿದ್ದಾರೆ.

ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರನೇ ಆರೋಪಿಗಾಗಿ ಶೋಧ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News