×
Ad

"ನನ್ನ ಕ್ಷೇತ್ರದ 40 ಸಾವಿರ ಮತದಾರರ ಹೆಸರು ಅಳಿಸಲಾಗಿದೆ": ಮಮತಾ ಬ್ಯಾನರ್ಜಿ ಆರೋಪ

Update: 2026-02-03 21:54 IST

ಮಮತಾ ಬ್ಯಾನರ್ಜಿ | Photo Credit : PTI

ಕೋಲ್ಕತಾ, ಫೆ. 2: ನನ್ನ ಕ್ಷೇತ್ರವೊಂದರಲ್ಲೇ 40 ಸಾವಿರ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ.

‘‘ನನ್ನ ಕ್ಷೇತ್ರದಲ್ಲಿ 40 ಸಾವಿರ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ ಅಳಿಸಲಾಗಿದೆ. ಬಿಜೆಪಿ ಮನಸ್ಥಿತಿ ಹೊಂದಿರುವ ಸೀಮಾ ಖನ್ನಾ ಎಂಬ ವ್ಯಕ್ತಿ ಚುನಾವಣಾ ಆಯೋಗದ ಕಚೇರಿಯಲ್ಲಿ ಕುಳಿತುಕೊಂಡು ಹೆಸರುಗಳನ್ನು ಅಳಿಸುತ್ತಿದ್ದಾರೆ. ಕೊಲೆಗಾರನಿಗೆ ಕೂಡ ತನ್ನನ್ನು ಸಮರ್ಥಿಸಿಕೊಳ್ಳಲು ಒಂದು ಅವಕಾಶ ಸಿಗುತ್ತದೆ’’ ಎಂದು ಹೇಳಿದ್ದಾರೆ.

‘‘ಸೀಮಾ ಖನ್ನಾ ಅವರ ಏಜೆನ್ಸಿ ಇದನ್ನು ಮಾಡಿದೆ. ಅವರಿಗೆ ಅದನ್ನು ಮಾಡಲು ಯಾವುದೇ ಅಧಿಕಾರ ಇಲ್ಲ. ಇದು ಕಾನೂನು ಬಾಹಿರ. 58 ಲಕ್ಷ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ ಅಳಿಸಲಾಗಿದೆ’’ ಎಂದು ಅವರು ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಹೇಳಿಕೆಯನ್ನು ಪುನರುಚ್ಛರಿಸಿದರು.

‘‘ತಳಮಟ್ಟದ ವೀಕ್ಷಕ’’ರನ್ನು ಕಾನೂನು ಬಾಹಿರವಾಗಿ ನಿಯೋಜಿಸಿರುವುದಕ್ಕೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ‘‘ತಳಮಟ್ಟದ ವೀಕ್ಷಕ’’ ರಿಗೆ ಪ್ರಜಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಯಾವುದೇ ಸ್ಥಾನ ಇಲ್ಲ. ಅವರು ಹಿಂಬಾಗಿಲಿನಿಂದ ನೇಮಕರಾದ ಬಿಜೆಪಿಯ ವ್ಯಕ್ತಿಗಳು ಎಂದರು.

ತಾರ್ಕಿಕ ವ್ಯತ್ಯಾಸದ ಹೆಸರಿನಲ್ಲಿ ಆಯೋಗ ಹೆಸರುಗಳನ್ನು ಅಳಿಸುತ್ತಿದೆ ಎಂದು ಹೇಳಿದ ಅವರು, ನೋಬೆಲ್ ಗೌರವಾನ್ವಿತ ಅಮರ್ತ್ಯ ಸೇನ್ ಅವರನ್ನೂ ಕೂಡ ಅವರ ತಾಯಿಯ ಪ್ರಾಯದ ಕುರಿತಂತೆ ಹಾಜರಾಗಲು ಸೂಚಿಸಲಾಗಿತ್ತು ಎಂದರು.

‘‘ನಮ್ಮೊಂದಿಗೆ ರಾಜಕೀಯವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ಹೋರಾಡಲು ನಾನು ಅವರಿಗೆ ಸವಾಲು ಹಾಕುತ್ತೇನೆ. ನಮ್ಮ ಪಕ್ಷ ಬಲಿಷ್ಠವಾಗಿದೆ, ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿದೆ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News