×
Ad

ಆಕಸ್ಮಿಕ ಅಪಘಾತಕ್ಕೆ ಬಲಿಯಾದ ಜಾನುವಾರುಗಳು : ಬಸ್‌ ಚಾಲಕನಿಗೆ ಥಳಿಸಿದ ಸ್ವಯಂಘೋಷಿತ ಗೋರಕ್ಷಕರು

Update: 2024-07-04 23:26 IST

Photo : TimesNow

ಕಥುವಾ : ಆಕಸ್ಮಿಕ ಅಪಘಾತದಲ್ಲಿ ಜಾನುವಾರುಗಳು ಬಲಿಯಾಗಿದ್ದಕ್ಕೆ ಸ್ವಯಂಘೋಷಿತ ಗೋರಕ್ಷರು ಬಸ್‌ ಚಾಲಕನಿಗೆ ಮಾರಣಾಂತಿಕವಾಗಿ ಥಳಿಸಿರುವ ಘಟನೆ ಜಮ್ಮು ಕಾಶ್ಮೀರದ ಕಥುವಾದಲ್ಲಿ ಮಂಗಳವಾರ ವರದಿಯಾಗಿದೆ.

ಕಥುವಾ ಜಿಲ್ಲೆಯ ಘಾಟಿ ಪ್ರದೇಶದಲ್ಲಿ ಬಸ್ಸೊಂದು ಆಕಸ್ಮಿಕವಾಗಿ ಡಿಕ್ಕಿ ಹೊಡೆದ ಪರಿಣಾಮ ಕರು ಮತ್ತು ಎತ್ತು ಸಾವನ್ನಪ್ಪಿದೆ ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಸ್ವಯಂಘೋಷಿತ ಗೋರಕ್ಷಕ ರವೀಂದರ್ ಸಿಂಗ್ ಮತ್ತು ಆತನ ಸಹಚರರು ಬಸ್‌ ಚಾಲಕ ರಮೇಶ್ ಕುಮಾರ್‌ ಎಂಬವರಿಗೆ ಕಟ್ಟಿಗೆಯಿಂದ ಥಳಿಸಿದ್ದಾರೆ. ಚಾಲಕ ರಮೇಶ್ ಕುಮಾರ್‌ ಅವರು ಕ್ಷಮೆ ಕೇಳಿ ಬಿಟ್ಟುಬಿಡುವಂತೆ ಅಂಗಲಾಚಿದರೂ ಕರುಣೆ ತೋರಿಸದ ದುಷ್ಕರ್ಮಿಗಳು, ತೀವ್ರವಾಗಿ ಥಳಿಸಿ ಆತನನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.

ಘಟನೆಯನ್ನು ಖಂಡಿಸಿ ಕಥುವಾದಲ್ಲಿ ಜನರು ಬೀದಿಗಳಿದು ಪ್ರತಿಭಟನೆ ನಡೆಸಿದ್ದು, ಆರೋಪಿ ರವೀಂದರ್ ಸಿಂಗ್‌ ನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡ ಬಸ್‌ ಚಾಲಕ ರಮೇಶ್‌ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News