×
Ad

ಚುನಾವಣಾ ಆಯೋಗದಿಂದ ನೂತನ ‘ಇಸಿಐನೆಟ್’ ಡಿಜಿಟಲ್ ವೇದಿಕೆ

Update: 2025-05-04 21:59 IST

ಚುನಾವಣಾ ಆಯೋಗ | PC : PTI

ಹೊಸದಿಲ್ಲಿ: ಚುನಾವಣಾ ಆಯೋಗವು ಮತದಾರರು, ಮತಗಟ್ಟೆ ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳಿಗಾಗಿ ಇಸಿಐನೆಟ್ ಎಂಬ ನೂತನ ಡಿಜಿಟಲ್ ಇಂಟರ್‌ಫೇಸ್ ಅನ್ನು ಅಭಿವೃದ್ಧಿಪಡಿಸಿದೆ. ಈಗ ಆಸ್ತಿತ್ವದಲ್ಲಿರುವ ತನ್ನ ಸುಮಾರು 40 ಮೊಬೈಲ್ ಹಾಗೂ ವೆಬ್ ಆ್ಯಪ್ಲಿಕೇಶನ್‌ಗಳನ್ನು ಸಂಯೋಜಿಸಿ ಇಸಿಐನೆಟ್ ಡಿಜಿಟಲ್ ಪ್ಲ್ಯಾಟ್‌ಫಾರಂ ಅನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ.

ಇದರಿಂದಾಗಿ ಬಳಕೆದಾರರಿಗೆ ಚುನಾವಣಾ ಆಯೋಗದ ಬೇರೆಬೇರೆ ಆ್ಯಪ್‌ಗಳನ್ನು ಜಾಲಾಡುವ ಮತ್ತು ತಮ್ಮ ವಿಭಿನ್ನ ಲಾಗಿನ್ ರುಜುವಾತುಗಳನ್ನು ನೆನಪಿಟ್ಟುಕೊಳ್ಳಬೇಕಾದ ಅನಿವಾರ್ಯತೆಯಿಂದ ಮುಕ್ತಿ ದೊರೆತಂತಾಗಲಿದೆ.

ಇಸಿಐನೆಟ್ ಚುನಾವಣಾ ಸಂಬಂಧಿತ ಚಟುವಟಿಕೆಗಳಿಗೆ ಒಂದೇ ವೇದಿಕೆಯನ್ನು ಒದಗಿಸುವ ಮೂಲಕ ಸರಳೀಕೃತ ಬಳಕೆದಾರ ಅನುಭವವನ್ನು ನೀಡಲಿದೆ ಎಂದು ಚುನಾವಣಾ ಆಯೋಗವು ಹೇಳಿಕೆಯೊಂದರಲ್ಲಿ ತಿಳಿಸಿದೆ.

5.5 ಕೋಟಿಗೂ ಅಧಿಕ ಡೌನ್‌ಲೋಡ್‌ಗಳನ್ನು ಹೊಂದಿರುವ ವೋಟರ್ ಹೆಲ್ಪ್‌ಲೈನ್(ಮತದಾರ ಸಹಾಯವಾಣಿ) ಆ್ಯಪ್, ವೋಟರ್ ಟರ್ನ್‌ಔಟ್ (ಮತದಾನ ಪ್ರಮಾಣದ ಮಾಹಿತಿ) ಆ್ಯಪ್, ಸಿೃಜಿಲ್, ಸುವಿಧಾ 2.0, ಇಎಸ್‌ಎಂಎಸ್, ಸಕ್ಷಮ್ ಹಾಗೂ ಕೆವೈಸಿ ಆ್ಯಪ್‌ನಂತಹ ಚುನಾವಣಾ ಆಯೋಗದ ಹಾಲಿ ಆ್ಯಪ್‌ಗಳನ್ನು ಇಸಿಐನೆಟ್ ತನ್ನಲ್ಲಿ ಒಳಪಡಿಸಿಕೊಳ್ಳಲಿದೆ.

ನೂತನ ಇಸಿಐನೆಟ್ ಈಗಾಗಲೇ ಅಭಿವೃದ್ಧಿಯ ಸುಧಾರಣಾ ಹಂತದಲ್ಲಿದ್ದು, ಅದರ ಸುಗಮ ಕಾರ್ಯನಿರ್ವಹಣಾ ಸಾಮರ್ಥ್ಯ, ಸರಳೀಕೃತ ಬಳಕೆ ಹಾಗೂ ಬಲಿಷ್ಠವಾದ ಸೈಬರ್ ಭದ್ರತೆಯನ್ನು ಖಾತರಿಪಡಿಸಿಕೊಳ್ಳಲು ವ್ಯಾಪಕವಾಗಿ ಟ್ರಯಲ್‌ಗಳನ್ನು ನಡೆಸಲಾಗುತ್ತಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News