×
Ad

ದಿಲ್ಲಿ: ಬೆಂಕಿಯಿಂದ ತಪ್ಪಿಸಿಕೊಳ್ಳಲು ಮನೆಯ ಮೇಲಿಂದ ಜಿಗಿದ ತಂದೆ ಹಾಗೂ ಇಬ್ಬರು ಮಕ್ಕಳು ಮೃತ್ಯು

Update: 2025-06-10 14:52 IST

Photo credit: news18.com

ಹೊಸದಿಲ್ಲಿ: ಬಹು ಅಂತಸ್ತಿನ ಅಪಾರ್ಟ್ ಮೆಂಟ್ ನಲ್ಲಿದ್ದ ತಮ್ಮ ನಿವಾಸದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ತಪ್ಪಿಸಿಕೊಳ್ಳಲು ತಮ್ಮ 10 ವರ್ಷದ ಪುತ್ರ ಹಾಗೂ ಪುತ್ರಿಯೊಂದಿಗೆ ವ್ಯಕ್ತಿಯೊಬ್ಬರು ಏಳನೆ ಅಂತಸ್ತಿನ ಬಾಲ್ಕನಿಯಿಂದ ಕೆಳಕ್ಕೆ ಜಿಗಿದ ಪರಿಣಾಮ, ಸ್ಥಳದಲ್ಲೇ ಮಕ್ಕಳು ಮೃತಪಟ್ಟು, ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿರುವ ಘಟನೆ ದಿಲ್ಲಿಯ ದ್ವಾರಕಾದ 13ನೇ ಸೆಕ್ಟರ್ ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ ಎಂದು ವರದಿಯಾಗಿದೆ.

ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆಗೆ ದ್ವಾರಕಾದ ಸೆಕ್ಟರ್ 13ರಲ್ಲಿರುವ ಬಹು ಅಂತಸ್ತಿನ ಅಪಾರ್ಟ್ ಮೆಂಟ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಾರ್ಟ್ ಮೆಂಟ್ ಸುತ್ತ ಬೆಂಕಿಯ ಕೆನ್ನಾಲಿಗೆ ಚಾಚುತ್ತಿದ್ದಂತೆಯೆ, ಯಶ್ ಯಾದವ್ ಎಂಬವರು ಏಳನೆ ಅಂತಸ್ತಿನ ಬಾಲ್ಕನಿಯಿಂದ ತಮ್ಮ 10 ವರ್ಷದ ಪುತ್ರ ಹಾಗೂ ಪುತ್ರಿಯೊಂದಿಗೆ ಕೆಳಕ್ಕೆ ಜಿಗಿದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಪುತ್ರ ಹಾಗೂ ಪುತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯಶ್ ಯಾದವ್ ರನ್ನು ತಕ್ಷಣವೇ ಐಜಿಐ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಎಂಟು ಅಗ್ನಿಶಾಮಕ ವಾಹನಗಳು ಧಾವಿಸಿದವಾದರೂ, ಬೆಂಕಿಯ ತೀವ್ರತೆ ಭಾರಿ ಪ್ರಮಾಣದಲ್ಲಿದ್ದುದರಿಂದ, ಸ್ಥಳದಲ್ಲಿ ಮತ್ತಷ್ಟು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಯಿತು.

ಈ ನಡುವೆ, ಯಶ್ ಯಾದವ್ ರ ಪತ್ನಿ ಹಾಗೂ ಹಿರಿಯ ಪುತ್ರ ಈ ಬೆಂಕಿ ಆಕಸ್ಮಿಕದಲ್ಲಿ ಪಾರಾಗಿದ್ದು, ಅವರನ್ನು ರಕ್ಷಿಸಲಾಗಿದೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಐಜಿಐ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಾರ್ಟ್ ಮೆಂಟ್ ನ ಎಲ್ಲ ನಿವಾಸಿಗಳನ್ನು ಸ್ಥಳದಿಂದ ತೆರವುಗೊಳಿಸಲಾಗಿದ್ದು, ಅಪಾರ್ಟ್ ಮೆಂಟ್ ಗೆ ಒದಗಿಸಲಾಗಿದ್ದ ವಿದ್ಯುಚ್ಛಕ್ತಿ ಹಾಗೂ ಪೆಟ್ರೋಲಿಯಂ ನೈಸರ್ಗಿಕ ಅನಿಲದ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News