×
Ad

ಫೆಮಾ ಉಲ್ಲಂಘನೆ ಪ್ರಕರಣ: ಇ.ಡಿ. ಮುಂದೆ ಹಾಜರಾದ ಅನಿಲ್ ಅಂಬಾನಿ

Update: 2023-07-03 22:44 IST

Anil Ambani. | Photo: PTI 

ಹೊಸದಿಲ್ಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದ ತನಿಖೆಗೆ ಸಂಬಂಧಿಸಿ ಉದ್ಯಮಿ ಅನಿಲ್ ಅಂಬಾನಿ ಅವರು ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.)ದ ಮುಂದೆ ಹಾಜರಾಗಿದ್ದಾರೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆಯ ಪ್ರಕರಣದಲ್ಲಿ ಹೇಳಿಕೆ ದಾಖಲಿಸಲು ಜಾರಿ ಅನಿಲ್ ಅಂಬಾನಿ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯದ ದಕ್ಷಿಣ ಮುಂಬೈಯ ಬಲ್ಲಾರ್ಡ್ ಕಚೇರಿಗೆ ರಿಲಾಯನ್ಸ್ ಎಡಿಎ ಸಮೂಹದ ಅಧ್ಯಕ್ಷ 64ರ ಹರೆಯದ ಅನಿಲ್ ಅಂಬಾನಿ ಅವರು ಬೆಳಗ್ಗೆ ಆಗಮಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News