×
Ad

ವಿಧಾನಸಭಾ ಉಪಚುನಾವಣೆ | ಎರಡು ದಶಕಗಳಲ್ಲಿ ಮೊದಲ ಬಾರಿಗೆ ಮತದಾರರ ಪಟ್ಟಿ ಪರಿಷ್ಕರಣೆ

Update: 2025-06-01 21:59 IST

PC : PTI

ಹೊಸದಿಲ್ಲಿ: ಸುಮಾರು ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ‘ಕಳಂಕರಹಿತ’ ಮತದಾರರ ಪಟ್ಟಿಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನವಾಗಿ ಉಪಚುನಾವಣೆಗಳು ನಡೆಯಲಿರುವ ಐದು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ಪರಿಷ್ಕರಿಸಿದೆ.

ತಮಿಳುನಾಡಿನಲ್ಲಿ ಕೊನೆಯ ಬಾರಿಗೆ 2006ರಲ್ಲಿ ಉಪಚುನಾವಣೆಗಾಗಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದರು.

1950ರ ಜನ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿದ ಅಧಿಕಾರಿಗಳು,ಚುನಾವಣಾ ಆಯೋಗವು ಬೇಡ ಎಂದು ನಿರ್ದೇಶಿಸದ ಹೊರತು ಪ್ರತಿ ಚುನಾವಣೆ ಮತ್ತು ಉಪ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕಾಗುತ್ತದೆ. ಮತದಾರರ ಪಟ್ಟಿಯನ್ನು ಪರಿಷ್ಕರಿಸದಿದ್ದರೆ ವಿಶೇಷ ಪರಿಷ್ಕರಣೆಯವರೆಗೆ ಅದರ ಸಿಂಧುತ್ವವು ಮುಂದುವರಿಯುತ್ತದೆ ಎಂದು ತಿಳಿಸಿದರು.

ಅಗತ್ಯಕ್ಕೆ ಅನುಗುಣವಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕೇ ಬೇಡವೇ ಎನ್ನುವುದನ್ನು ಚುನಾವಣಾ ಆಯೋಗವು ನಿರ್ಧರಿಸುತ್ತದೆ ಎಂದರು.

ಗುಜರಾತಿನ ಎರಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ಗಳ ತಲಾ ಒಂದು ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ಜೂ.19ರಂದು ಉಪಚುನಾವಣೆಗಳು ನಡೆಯಲಿವೆ.

ಗುಜರಾತಿನ ಕಡೀ ಮತ್ತು ವಿಸಾವದರ, ಕೇರಳದ ನಿಲಂಬೂರ್, ಪಶ್ಚಿಮ ಬಂಗಾಳದ ಕಾಲಿಗಂಜ್ ಮತ್ತು ಪಂಜಾಬಿನ ಲೂಧಿಯಾನಾ ಇವು ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News