ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಇರಿದು ಕೊಲೆ
Update: 2025-12-06 10:26 IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಸಂಗಮ್ ವಿಹಾರ್‌ನಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿಯನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇರ್ಷಾದ್ ಕೊಲೆಯಾದ ವಿದ್ಯಾರ್ಥಿ. ಶುಕ್ರವಾರ ಬೆಳಿಗ್ಗೆ 11.30ರ ವೇಳೆ ಈ ಘಟನೆ ನಡೆದಿದೆ. ದಿಲ್ಲಿ ವಿವಿಯಲ್ಲಿ ಪ್ರಥಮ ವರ್ಷದ ಎಲ್ಎಲ್‌ಬಿ ವಿದ್ಯಾರ್ಥಿಯಾಗಿರುವ ಇರ್ಷಾದ್‌ಗೆ ಹಲವು ಇರಿತದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇರ್ಷಾದ್ ಸಹೋದರಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಚಿಕ್ಕಪ್ಪ ಮುಬಾರಕ್ ಮತ್ತುಇತರರು ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇರ್ಷಾದ್ ಮತ್ತು ಆರೋಪಿ ಮುಬಾರಕ್ ನಡುವೆ ಜಗಳ ನಡೆದು ಮಾರಣಾಂತಿಕ ಹಲ್ಲೆ ನಡೆದಿದೆ. ಮನೆ ಸಮೀಪ ಸ್ವಚ್ಛತೆಗೆ ಸಂಬಂಧಿಸಿ ಎರಡೂ ಕಡೆಯವರ ನಡುವೆ ವಿವಾದ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.