×
Ad

ಬಿಜೆಪಿ ಶಾಸಕನ ಫಾರ್ಮ್‌ಹೌಸ್‌ನಲ್ಲಿ ಶಸ್ತ್ರಾಸ್ತ್ರ ಲೂಟಿ | ನಾಲ್ವರು ಪೊಲೀಸರು ಸೇರಿ ಐವರ ಬಂಧನ

Update: 2024-08-29 12:05 IST

Photo:X/@manipur_police

ಇಂಫಾಲ: ಬಿಜೆಪಿ ಶಾಸಕರೊಬ್ಬರ ಫಾರ್ಮ್‌ಹೌಸ್‌ನಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ ಆರೋಪದಲ್ಲಿ ನಾಲ್ವರು ಪೊಲೀಸರು ಸೇರಿ ಐವರನ್ನು ಬಂಧಿಸಿರುವ ಘಟನೆ ಮಣಿಪುರದ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಮಂಗಳವಾರ ರಾತ್ರಿ ಮೂರು ಐಎನ್‌ಎಸ್‌ಎಎಸ್ ರೈಫಲ್‌ಗಳು, ನಾಲ್ಕು ಮ್ಯಾಗಝಿನ್‌ಗಳು ಮತ್ತು 80 ಸುತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇಂಫಾಲ್ ಪೂರ್ವ ಜಿಲ್ಲೆಯ ಸೆಕ್ತಾ ಅವಾಂಗ್ ಲೈಕೈಯಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರ ಐವರನ್ನು ಬುಧವಾರ ಬಂಧಿಸಲಾಗಿದೆ. ಬಂಧಿತರಲ್ಲಿ ಓರ್ವ ನಾಗರಿಕ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಕ್ಮಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಲೀಕಿಂತಬಿಯಲ್ಲಿ ಬಿಜೆಪಿ ಶಾಸಕ ಜಾಯ್‌ಕಿಶನ್ ಸಿಂಗ್ ಫಾರ್ಮ್‌ಹೌಸ್‌ನಲ್ಲಿ ಅಪರಿಚಿತರು ಸಿಬ್ಬಂದಿಯ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ವರ್ಷ ಕುಕೀ ಮತ್ತು ಮೈತೈ ಸಮುದಾಯದ ನಡುವೆ ಘರ್ಷಣೆ ನಡೆದ ಸ್ಥಳದಲ್ಲೇ ಶಸ್ತ್ರಾಸ್ತ್ರ ಲೂಟಿ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News