×
Ad

ರಾಮ ಮಂದಿರ ಹೆಸರಲ್ಲಿ ಬಿಜೆಪಿಯಿಂದ ‘ಗಿಮಿಕ್ ಶೋ’ : ಮಮತಾ ಬ್ಯಾನರ್ಜಿ

Update: 2024-01-09 20:49 IST

ಮಮತಾ ಬ್ಯಾನರ್ಜಿ | Photo; PTI 

ಜಾಯ್ನಗರ: ಲೋಕಸಭಾ ಚುನಾವಣೆಗಳಿಗೆ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಮೂಲಕ ಬಿಜೆಪಿ ‘ಗಿಮಿಕ್ ಶೋ’ದಲ್ಲಿ ತೊಡಗಿಕೊಂಡಿದೆ ಎಂದು ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಂಗಳವಾರ ಇಲ್ಲಿ ಆರೋಪಿಸಿದರು.

ಇತರ ಸಮುದಾಯಗಳನ್ನು ಹೊರಗಿರಿಸುವ ಉತ್ಸವಗಳನ್ನು ತಾನು ಬೆಂಬಲಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದರು.

ದಕ್ಷಿಣ 24 ಪರಗಣಗಳ ಜಿಲ್ಲೆಯ ಜಾಯ್ನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬ್ಯಾನರ್ಜಿ,ಧಾರ್ಮಿಕ ಆಧಾರದಲ್ಲಿ ಜನರನ್ನು ವಿಭಜಿಸುವುದರಲ್ಲಿ ತನಗೆ ನಂಬಿಕೆಯಿಲ್ಲ. ಎಲ್ಲ ಸಮುದಾಯಗಳನ್ನು ಒಳಗೊಂಡಿರುವ ಮತ್ತು ಏಕತೆಯನ್ನು ಪ್ರತಿಪಾದಿಸುವ ಉತ್ಸವಗಳನ್ನು ತಾನು ನಂಬುತ್ತೇನೆ. ಬಿಜೆಪಿ ಅದನ್ನು (ರಾಮ ಮಂದಿರ ಉದ್ಘಾಟನೆ) ನ್ಯಾಯಾಲಯದ ನಿರ್ದೇಶನದಡಿ ಮಾಡುತ್ತಿದೆ,ಆದರೆ ಗಿಮಿಕ್ ಪ್ರದರ್ಶನವಾಗಿ ಲೋಕಸಭಾ ಚುನಾವಣೆಗಳಿಗೆ ಮುನ್ನ ಅದನ್ನು ಮಾಡುತ್ತಿದೆ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯು ಜ.22ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News