×
Ad

ಗುಜರಾತ್: ಅಕಾಲಿಕ ಮಳೆ; 20 ಸಾವು

Update: 2023-11-27 20:24 IST

Photo: PTI 

ಗಾಂಧಿನಗರ : ಗುಜರಾತ್ ನಲ್ಲಿ ರವಿವಾರ ಸುರಿದ ಭಾರೀ ಅಕಾಲಿಕ ಮಳೆ ಮತ್ತು ಸಿಡಿಲಾಘಾತದಿಂದ 20 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನವರು ಸಿಡಿಲಿಗೆ ಬಲಿಯಾಗಿದ್ದಾರೆ.

ದಾಹೋದ್ ಜಿಲ್ಲೆಯಲ್ಲಿ ನಾಲ್ವರು, ಭರೂಚ್ ಜಿಲ್ಲೆಯಲ್ಲಿ ಮೂವರು, ಟಾಪಿ ಜಿಲ್ಲೆಯಲ್ಲಿ ಇಬ್ಬರು ಮತ್ತು ಅಹ್ಮದಾಬಾದ್, ಅಮ್ರೇಲಿ, ಬನಸಕಾಂತ, ಬೋಟದ್, ಖೇಡ, ಮೆಹ್ಸಾನ, ಪಂಚ್ಮಹಲ್, ಸಬರ್ಕಾಂತ, ಸೂರತ್, ಸುರೇಂದ್ರನಗರ ಮತ್ತು ದೇವಭೂಮಿ ದ್ವಾರಕ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ರಾಜ್ಯ ತುರ್ತುಪರಿಸ್ಥಿತಿ ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

ಪ್ರಾಕೃತಿಕ ವಿಕೋಪದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ನಿಯಮಗಳಂತೆ ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಮಳೆ ಮತ್ತು ಸಿಡಿಲಿನ ಪ್ರಕೋಪಕ್ಕೆ ಕನಿಷ್ಠ 40 ಜಾನುವಾರುಗಳೂ ಬಲಿಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News