×
Ad

ದಿಲ್ಲಿಯಲ್ಲಿ ಭಾರೀ ಮಳೆ: ಭಾರತಮಂಡಪಂ ಸಂಕೀರ್ಣಕ್ಕೂ ನುಗ್ಗಿದ ಮಳೆ ನೀರು

Update: 2023-09-10 22:48 IST

 Photo: PTI

ಹೊಸದಿಲ್ಲಿ: ಜಿ20 ಶೃಂಗಸಭೆ ನಡೆಯುತ್ತಿರುವ ಪ್ರಗತಿ ಮೈದಾನ ಪ್ರದೇಶ ಸೇರಿದಂತೆ ದಿಲ್ಲಿಯ ವಿವಿಧೆಡೆ ರವಿವಾರ ಭಾರೀ ಮಳೆಯಾಗಿದೆ.

ಜಿ 20 ಶೃಂಗಸಭೆಯ ವೇದಿಕೆಯಾದ ಭಾರತ ಮಂಡಪಂ ಸಂಕೀರ್ಣದ ಮೇಲೆ ಭಾರೀ ಮಳೆ ಸುರಿಯುತ್ತಿರುವುದನ್ನು ತೋರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಾಜಧಾನಿಯ ವಿವಿಧ ಪ್ರದೇಶಗಳು ಜಲಾವೃತಗೊಂಡಿವೆ. ಭಾರತ ಮಂಡಪಂ ಸಂಕೀರ್ಣದೊಳಗೆ ಹರಿದುಬಂದ ಮಳೆನೀರನ್ನು ಸಿಬ್ಬಂದಿ ಪಂಪಿಂಗ್ ಮೂಲಕ ತೆರವುಗೊಳಿಸುತ್ತಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಫ್ದರ್ಜಂಗ್, ವಿಮಾನನಿಲ್ದಾಣ, ರಾಜಘಾಟ್, ವಸಂತ ಕುಂಜ,ಮುನಿರ್ಕಾ, ನರೇಲಾ ಸೇರಿದಂತೆ ವಿವಿಧೆಡೆ ಶನಿವಾರ ರಾತ್ರಿಯಿಂದ ಭಾರೀ ಮಳೆಯಾಗಿದ್ದು, ರವಿವಾರ ಬೆಳಗ್ಗಿನವರೆಗೂ ಮುಂದುವರಿದಿದೆಯೆಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News