×
Ad

ಮಿಗ್-21ಗೆ ಐಎಫ್ ಅಂತಿಮ ವಿದಾಯ | ಹಾರಾಟ ನಡೆಸಿ ಅಂತಿಮ ಗೌರವ ಸಲ್ಲಿಸಿದ ವಾಯು ಪಡೆ ಮುಖ್ಯಸ್ಥ

Update: 2025-08-26 21:34 IST

 ಅಮರ್ ಪ್ರೀತ್ ಸಿಂಗ್ | PC : X \ @Nakro_Jojo

ಹೊಸದಿಲ್ಲಿ, ಆ. 26: ಭಾರತೀಯ ವಾಯು ಪಡೆ (ಐಎಎಫ್)ಯ ಹೆಮ್ಮೆ ಹಾಗೂ 6 ದಶಕಗಳಿಗೂ ಹೆಚ್ಚು ಕಾಲ ಭಾರತದ ಆಕಾಶದ ನಂಬಿಕೆಯ ರಕ್ಷಕ ಎಂಬ ಶ್ಲಾಘನೆಗೆ ಒಳಗಾದ ದಂತಕತೆ ಮಿಗ್-21 ಯುದ್ಧ ವಿಮಾನ 2025 ಸೆಪ್ಟಂಬರ್ 26ರಂದು ಸೇವೆಯಿಂದ ನಿವೃತ್ತಿ ಹೊಂದಿತು.

ಈ ಚಾರಿತ್ರಿಕ ವಿದಾಯದ ಹಿನ್ನೆಲೆಯಲ್ಲಿ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಬಿಕೇನರ್‌ನ ನಾಲ್ ವಾಯು ನೆಲೆಯಿಂದ ಏಕಾಂಗಿಯಾಗಿ ಹಾರಾಟ ನಡೆಸುವ ಮೂಲಕ ಮಿಗ್-21 ಯುದ್ಧ ವಿಮಾನಕ್ಕೆ ವೈಯುಕ್ತಿಕ ಗೌರವ ಸಲ್ಲಿಸಿದರು.

‘‘ಮಿಗ್-21 1960ರಿಂದ ಭಾರತೀಯ ವಾಯು ವಾಯು ಪಡೆಯ ಬೆನ್ನೆಲುಬಾಗಿದೆ. ವೇಗವಾದ, ಚುರುಕಾದ ಹಾಗೂ ಸರಳ ವಿನ್ಯಾಸದ ಈ ಯುದ್ಧ ವಿಮಾನ ಹಾರಿಸಿದ ಪ್ರತಿಯೊಬ್ಬ ಪೈಲಟ್‌ ನ ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ’’ ಎಂದು ಮಿಗ್-21 ಯುದ್ಧ ವಿಮಾನವನ್ನು ಹಾರಾಟ ನಡೆಸಿದ ಬಳಿಕ ಸಿಂಗ್ ಹೇಳಿದ್ದಾರೆ.

ಮಿಗ್-21 1963ರಲ್ಲಿ ಸೇವೆಗೆ ಪ್ರವೇಶಿಸಿತು. ಚಂಡಿಗಢದಲ್ಲಿ ನೆಲೆ ಹೊಂದಿರುವ 28 ಸ್ಕ್ವಾಡ್ರನ್, ಈ ಯುದ್ಧ ವಿಮಾನವನ್ನು ಮೊದಲ ಬಾರಿಗೆ ನಿರ್ವಹಿಸಿತು. ಈ ಮೂಲಕ ಸ್ಕ್ವಾಡ್ರನ್ ಭಾರತದ ಮೊದಲ ‘ದಿ ಫಸ್ಟ್ ಸೂಪರ್ ಸಾನಿಕ್ಸ್’ ಎಂಬ ಹೆಸರು ಪಡೆಯಿತು ಎಂದು ಐಎಎಫ್ ವಕ್ತಾರ ವಿಂಗ್ ಕಮಾಂಡರ್ ಜೈದೀಪ್ ಸಿಂಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News