×
Ad

ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ ಭಾರತ ಮತ್ತು ಬಾಂಗ್ಲಾದೇಶ ದೇಶಗಳಿಂದ ಜಂಟಿ ಸಮರಾಭ್ಯಾಸ

Update: 2025-03-13 21:25 IST

PC : timesofindia.indiatimes.com

ಹೊಸದಿಲ್ಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿಗೊಂಡ ನಂತರ ಭಾರತ ಮತ್ತು ಬಾಂಗ್ಲಾದೇಶ ಮಧ್ಯೆ ಉದ್ಭವಿಸಿರುವ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೂ ಉಭಯ ದೇಶಗಳ ಸೇನಾ ಬಾಂಧವ್ಯ ಹಿಂದಿನಂತೆಯೇ ಮುಂದುವರಿದಿದ್ದು, ಕಳೆದ ವಾರವಷ್ಟೆ ಬಂಗಾಳ ಕೊಲ್ಲಿಯಲ್ಲಿ ಎರಡೂ ದೇಶಗಳು ಜಂಟಿ ಸಮರಾಭ್ಯಾಸ ಹಾಗೂ ಸಮನ್ವಯದ ಗಸ್ತನ್ನು ಮುಕ್ತಾಯಗೊಳಿಸಿದವು.

ಈ ಕುರಿತು ಗುರುವಾರ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, “ಭಾರತದ ವಿಧ್ವಂಸಕ ನೌಕೆ ಐಎನ್ಎಸ್ ರಣವೀರ್ ಹಾಗೂ ಬಾಂಗ್ಲಾದೇಶದ ಯುದ್ಧ ನೌಕೆ ಬಿಎನ್ಎಸ್ ಅಬು ಉಬೈದಾ ಪಾಲ್ಗೊಂಡಿದ್ದ ಬೋಂಗೊಸಾಗರ್ ದ್ವಿಪಕ್ಷೀಯ ಸಮರಾಭ್ಯಾಸವು ಪರಸ್ಪರರ ಸಾಗರ ವ್ಯಾಪ್ತಿಯ ಸವಾಲುಗಳಿಗೆ ಸಹಭಾಗಿತ್ವದ ಪ್ರತಿಕ್ರಿಯೆ ನೀಡಲು ನೆರವು ನೀಡಿತು” ಎಂದು ತಿಳಿಸಿದ್ದಾರೆ.

2019ರಲ್ಲಿ ಪ್ರಾರಂಭಗೊಂಡಿದ್ದ ಈ ವಾರ್ಷಿಕ ಸಮರಾಭ್ಯಾಸದ ಇತ್ತೀಚಿನ ಆವೃತ್ತಿಯು ಮೇಲ್ಮೈ ಗುಂಡಿನ ದಾಳಿ, ಯುದ್ಧ ತಂತ್ರ ಕೌಶಲ, ಮರುಪೂರಣ ಪ್ರಗತಿ, ಸಂವಹನ ಪೂರ್ವಾಭ್ಯಾಸಗಳು ಹಾಗೂ ವಿಬಿಎಸ್ಎಸ್ (ಭೇಟಿ, ಹತ್ತುವಿಕೆ, ಶೋಧ ಹಾಗೂ ವಶಪಡಿಸಿಕೊಳ್ಳುವಿಕೆ)ಯಂತಹ ಸಂಕೀರ್ಣ ಕಾರ್ಯಾಚರಣೆಗಳನ್ನು ಒಳಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News