×
Ad

ಪಾಕಿಸ್ತಾನಕ್ಕೆ ಅಂಚೆ - ಪಾರ್ಸೆಲ್ ಸೇವೆ ಸ್ಥಗಿತಗೊಳಿಸಿದ ಭಾರತ

Update: 2025-05-03 18:02 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತವು ಶನಿವಾರ ಪಾಕಿಸ್ತಾನದಿಂದ ವಾಯು ಮತ್ತು ಇತರ ಮಾರ್ಗಗಳ ಮೂಲಕ ವಿನಿಮಯವಾಗುತ್ತಿದ್ದ ಎಲ್ಲಾ ರೀತಿಯ ಅಂಚೆ ಮತ್ತು ಪಾರ್ಸೆಲ್‌ಗಳ ಸೇವೆಯನ್ನು ಸ್ಥಗಿತಗೊಳಿಸಿದೆ.

ಈ ಕುರಿತು ಅಂಚೆ ಇಲಾಖೆಯು ಆದೇಶ ಹೊರಡಿಸಿದೆ.

ಈ ಹಿಂದೆ ಪಾಕಿಸ್ತಾನದಿಂದ ಎಲ್ಲಾ ಆಮದಾಗುವ ಸರಕುಗಳನ್ನು ಭಾರತವು ನಿಷೇಧಿಸಿತ್ತು. ಆ ಬಳಿಕ ಪಾರ್ಸೆಲ್ ಸೇರಿದಂತೆ ಅಂಚೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಎ.22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಒಬ್ಬ ಕಾಶ್ಮೀರಿ ಸೇರಿದಂತೆ 26 ಮಂದಿ ಮೃತಪಟ್ಟಿದ್ದರು. ಆ ಬಳಿಕ ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News