Goa ಕರಾವಳಿಯಲ್ಲಿ ಉಕ್ರೇನಿನ ಪ್ರಜೆಗೆ ಹೃದಯಾಘಾತ: ಕೋಸ್ಟ್ ಗಾರ್ಡ್‌ನಿಂದ ರಕ್ಷಣೆ
Update: 2025-12-14 14:55 IST
Photo: x/@IndiaCoastGuard
ಹೊಸದಿಲ್ಲಿ: ಗೋವಾ ಕರಾವಳಿಯಲ್ಲಿ ಸಾಗುತ್ತಿದ್ದ ಮರ್ಚೆಂಟ್ ಹಡಗಿನಲ್ಲಿ ಹೃದಯಾಘಾತಕ್ಕೊಳಗಾದ 62 ವರ್ಷದ ಉಕ್ರೇನಿನ ಪ್ರಜೆಯನ್ನು ಭಾರತೀಯ ಕೋಸ್ಟ್ ಗಾರ್ಡ್ (ICG) ಶನಿವಾರ ತುರ್ತು ವೈದ್ಯಕೀಯ ನೆರವು ನೀಡುವ ಮೂಲಕ ಸ್ಥಳಾಂತರ ಮಾಡಿ ರಕ್ಷಿಸಿದೆ.
ಮಾಲ್ಟಾದ ಧ್ವಜ ಹೊಂದಿದ್ದ ಎಂವಿ ಇಂಟರ್ಯಾಸಿಯಾ ಆಂಪ್ಲಿಫೈ ಹಡಗಿನಿಂದ ಬಂದ ತುರ್ತು ಕರೆ ಸ್ವೀಕರಿಸಿದ ತಕ್ಷಣ ಕೋಸ್ಟ್ ಗಾರ್ಡ್ ಶಿಪ್ ಸಿ–420 ಕಾರ್ಯಾಚರಣೆಗೆ ಇಳಿಯಿತು. ಹಡಗಿನಲ್ಲಿ ಪ್ರಾಥಮಿಕ ವೈದ್ಯಕೀಯ ತಪಾಸಣೆ ನಡೆಸಿ, ರೋಗಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಅಗತ್ಯ ಚಿಕಿತ್ಸೆಗೆ ಕರೆದೊಯ್ಯಲಾಯಿತು ಎಂದು ICG ಪ್ರಕಟನೆಯಲ್ಲಿ ತಿಳಿಸಿದೆ.
ಸಮುದ್ರದಲ್ಲಿ ತುರ್ತು ಪರಿಸ್ಥಿತಿಗಳಿಗೆ ಕ್ಷಣಾರ್ಧದಲ್ಲೇ ಪ್ರತಿಕ್ರಿಯಿಸುವ ಕೋಸ್ಟ್ ಗಾರ್ಡ್‌ನ ಸಿದ್ಧತೆಯನ್ನು ಈ ಕಾರ್ಯಾಚರಣೆ ಮತ್ತೊಮ್ಮೆ ದೃಢಪಡಿಸಿದೆ. ‘ಸಮುದ್ರದಲ್ಲಿ ಜೀವ ರಕ್ಷಿಸುವುದು ನಮ್ಮ ಧ್ಯೇಯ’ ಎಂದು ICG ಹೇಳಿದೆ.