ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ
LPG gas price: Govt hikes commercial cylinder rates
Update: 2023-10-01 11:22 IST
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಅಕ್ಟೋಬರ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಹಣದುಬ್ಬರದ ಆಘಾತದ ಎದುರಾಗಿದೆ. LPG ಸಿಲಿಂಡರ್‌ನ ಬೆಲೆಯು ಅಕ್ಟೋಬರ್ 1 ರಿಂದ ಹೆಚ್ಚಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಏರಿಕೆ ಮಾಡಿದ್ದು, ಇದರ ಅಡಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆಯು 209 ರೂ. ಏರಿಕೆ ಕಂಡಿದೆ.
209 ರೂಪಾಯಿಗಳ ಹೆಚ್ಚಳದ ನಂತರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,731.50 ರೂ ಆಗಲಿದೆ ಎಂದು ಹೇಳಲಾಗಿದೆ.