×
Ad

ಕೇವಲ ಎರಡು ಸಭೆಗೆ ಅಡುಗೆ ಅನಿಲದ ಬೆಲೆ 200 ರೂ. ಇಳಿಕೆ, ಇದು ‘ಇಂಡಿಯಾ’ದ ತಾಕತ್ತು: ಮಮತಾ ಬ್ಯಾನರ್ಜಿ

Update: 2023-08-30 16:06 IST

ಮಮತಾ ಬ್ಯಾನರ್ಜಿ (Photo: PTI)

ಕೊಲ್ಕತ್ತಾ: ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ ಒತ್ತಡಕ್ಕೆ ಮಣಿದು ಮೋದಿ ಸರ್ಕಾರ ಅಡುಗೆ ಅನಿಲದ ಬೆಲೆ ಇಳಿಕೆ ಮಾಡಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟ್ವೀಟ್‌ ಮಾಡಿದ್ದಾರೆ.

"ಪ್ರತಿಪಕ್ಷಗಳ 'INDIA' ಒಕ್ಕೂಟವು ರಚನೆಯಾದ ನಂತರ ಕೇವಲ ಎರಡು ಸಭೆಗಳನ್ನು ನಡೆಸಿದೆ. ಇದೇ ವೇಳೆ, ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 200 ರೂಪಾಯಿಗೆ ಇಳಿಸಲಾಗಿದೆ. ಇದು INDIA ದ ತಾಕತ್ತು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಗೃಹಬಳಕೆ ಎಲ್‌ಪಿಜಿ ದರವನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಲೋಕಸಭೆ ಚುನಾವಣೆಗೆ ಬಿಜೆಪಿ ನಡೆಸುತ್ತಿರುವ ʼಚುನಾವಣೆ ಗಿಮಿಕ್ʼ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಕೇಂದ್ರದ ಬಣ್ಣಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News