×
Ad

2 ತಿಂಗಳ ಭಾಗಶಃ ಇಂಟರ್ನೆಟ್‌ ನಿಷೇಧ ತೆರವುಗೊಳಿಸಲು ಮಣಿಪುರ ಹೈಕೋರ್ಟ್‌ ಆದೇಶ

ಪರಿಶಿಷ್ಟ ಪಂಗಡಗಳ (ಎಸ್‌ಟಿ) ಸ್ಥಾನಮಾನದ ಬೇಡಿಕೆಯ ಮೇಲೆ ಮಣಿಪುರದ ಕುಕಿ ಬುಡಕಟ್ಟು ಹಾಗೂ ಬಹುಸಂಖ್ಯಾತ ಮೈತೇಯಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದ ಬಳಿಕ ಸರಕಾರವು ಮೇ.3ರಂದು ಮಣಿಪುರದಲ್ಲಿ ಇಂಟರ್ನೆಟ್‌ ಸ್ಥಗಿತಗೊಳಿಸಿ ಆದೇಶ ನೀಡಿತ್ತು.

Update: 2023-07-08 18:55 IST

Photo: PTI

ಇಂಫಾಲ: ಜನಾಂಗೀಯ ಹಿಂಸಾಚಾರ ಪೀಡಿತವಾಗಿರುವ ಮಣಿಪುರದಲ್ಲಿ ಲೈನ್‌ ಗಳು ಮತ್ತು ಫೈಬರ್‌ ಆಪ್ಟಿಕ್‌ ಸಂಪರ್ಕಗಳ ಗುತ್ತಿಗೆ ಪಡೆದಿರುವವರಿಗೆ ಇಂಟರ್‌ನೆಟ್‌ ಬಳಸಲು ಅನುಮತಿ ನೀಡುವಂತೆ ಮಣಿಪುರ ಹೈಕೋರ್ಟ್ ಎನ್. ಬಿರೇನ್ ಸಿಂಗ್ ಸರ್ಕಾರಕ್ಕೆ ಆದೇಶಿಸಿದೆ.

ಪರಿಶಿಷ್ಟ ಪಂಗಡಗಳ (ಎಸ್‌ಟಿ) ಸ್ಥಾನಮಾನದ ಬೇಡಿಕೆಯ ಮೇಲೆ ಮಣಿಪುರದ ಕುಕಿ ಬುಡಕಟ್ಟು ಹಾಗೂ ಬಹುಸಂಖ್ಯಾತ ಮೈತೇಯಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದ ಬಳಿಕ ಸರಕಾರವು ಮೇ.3ರಂದು ಮಣಿಪುರದಲ್ಲಿ ಇಂಟರ್ನೆಟ್‌ ಸ್ಥಗಿತಗೊಳಿಸಿ ಆದೇಶ ನೀಡಿತ್ತು.

"ವೈಟ್‌ಲಿಸ್ಟ್" ಫೋನ್ ಸಂಖ್ಯೆಗಳಿಗೆ ಇಂಟರ್ನೆಟ್ ಸಂಪರ್ಕವನ್ನು ಮರುಸ್ಥಾಪಿಸಬಹುದೇ ಎಂಬುವುದರ ಕುರಿತು ರಾಜ್ಯ ಸರ್ಕಾರವು ಪರಿಗಣಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಮಣಿಪುರದಲ್ಲಿ ಇಂಟರ್ನೆಟ್ ನಿಷೇಧ ಮಾಡಿದ ಕಾರಣದಿಂದ ಬಿಲ್ ಪಾವತಿಗಳು, ಶಾಲಾ-ಕಾಲೇಜುಗಳಿಗೆ ಪ್ರವೇಶ, ಪರೀಕ್ಷೆಗಳು, ದಿನನಿತ್ಯದ ಶಾಪಿಂಗ್ ಮತ್ತು ಖಾಸಗಿ ಸಂಸ್ಥೆಗಳ ಕಾರ್ಯಾಚರಣೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ.

ಹಲವಾರು ಜನರು ಮನವಿಗಳನ್ನು ಸಲ್ಲಿಸಿದ ನಂತರ, ಜೂನ್ 20 ರಂದು ಹೈಕೋರ್ಟ್ ಕೆಲವು ಗೊತ್ತುಪಡಿಸಿದ ಸ್ಥಳಗಳಲ್ಲಿ ಸೀಮಿತ ಇಂಟರ್ನೆಟ್ ಸೇವೆಗಳನ್ನು ಅನುಮತಿಸುವಂತೆ ರಾಜ್ಯ ಅಧಿಕಾರಿಗಳಿಗೆ ತಿಳಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News