×
Ad

ಪಾಕಿಸ್ತಾನದ ಜೊತೆಗಿನ ಉದ್ವಿಗ್ನತೆ ಮಧ್ಯೆ ದೇಶದ ಹಲವು ರಾಜ್ಯಗಳಲ್ಲಿ ಅಣಕು ಕವಾಯತು ಪ್ರಾರಂಭ

Update: 2025-05-07 16:44 IST

Photo credit: PTI

ಹೊಸದಿಲ್ಲಿ: ಪಾಕಿಸ್ತಾನದ ಜೊತೆಗಿನ ಉದ್ವಿಗ್ನತೆ ಮಧ್ಯೆ ದೇಶದ ಹಲವು ರಾಜ್ಯಗಳಲ್ಲಿ ಗೃಹ ಸಚಿವಾಲಯದ ನಿರ್ದೇಶನದಂತೆ ಅಣಕು ಕವಾಯತು ಸಂಜೆ 4 ಗಂಟೆಗೆ ಆರಂಭವಾಗಿದೆ.

ಮುಂಬೈನ ಕ್ರಾಸ್ ಮೈದಾನದಲ್ಲಿ ಅಣಕು ಕವಾಯತು ನಡೆಯುತ್ತಿದೆ. ಹರ್ಯಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಅಣಕು ಕವಾಯತು ನಡೆಯುತ್ತಿದೆ. ಅಮೃತಸರದಲ್ಲಿ ಪೊಲೀಸ್ ಮತ್ತು ನಾಗರಿಕ ರಕ್ಷಣಾ ಇಲಾಖೆಯಿಂದ ಅಣಕು ಕವಾಯತು ನಡೆಯುತ್ತಿದೆ. ಸಾರ್ವಜನಿಕ ಜಾಗೃತಿ ಮತ್ತು ಸನ್ನದ್ಧತೆಗಾಗಿ ಕೇಂದ್ರ ರೈಲ್ವೆಯು ಸಿಎಸ್ಎಂಟಿಯಲ್ಲಿ ಅಣಕು ಕವಾಯತು ನಡೆಸುತ್ತಿದೆ.

ಜಾರ್ಖಂಡ್‌ನ 5 ಜಿಲ್ಲೆಗಳಲ್ಲಿ ಅಣಕು ಕವಾಯತು ನಡೆಯುತ್ತಿದೆ. ಜಾರ್ಖಂಡ್ನಾದ್ಯಂತ ಆರು ಸ್ಥಳಗಳಲ್ಲಿ ಭದ್ರತಾ ಕಸರತ್ತುಗಳಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೋಲ್ಕತ್ತಾದ ನಾಲ್ಕು ಖಾಸಗಿ ಶಾಲೆಗಳಲ್ಲಿ ಅಣಕು ಕವಾಯತು ನಡೆಯುತ್ತಿದೆ. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಅಣಕು ಪ್ರದರ್ಶನ ನಡೆಸಲಾಯಿತು. ನೋಯ್ಡಾದ ಬೊಟಾನಿಕಲ್ ಗಾರ್ಡನ್ ಮೆಟ್ರೋ ನಿಲ್ದಾಣದಲ್ಲಿ ಕೂಡ ಅಣಕು ಕವಾಯತು ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News