×
Ad

‘ಮೋದಿ ಹೈ ತೋ ಮುಮ್ಕಿನ್ ಹೈ’ ವೀಡಿಯೊಗೆ ಲಕ್ಷಕ್ಕೂ ಹೆಚ್ಚು ಜನರಿಂದ ಡಿಸ್ ಲೈಕ್ಸ್: ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನೇತ್ ವ್ಯಂಗ್ಯ

Update: 2025-10-17 16:52 IST

Photo: X/@SupriyaShrinate

ಹೊಸದಿಲ್ಲಿ: ಟಿ-ಸೀರೀಸ್ ಸಂಸ್ಥೆ ಬಿಡುಗಡೆ ಮಾಡಿದ ‘ಮೋದಿ ಹೈ ತೋ ಮುಮ್ಕಿನ್ ಹೈ’ ವೀಡಿಯೊ ಆನ್‌ ಲೈನ್‌ ನಲ್ಲಿ ಭಾರೀ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸುವ ಉದ್ದೇಶದಿಂದ ಬಿಡುಗಡೆಯಾದ ಈ ಹಾಡು ಯೂಟ್ಯೂಬ್‌ ನಲ್ಲಿ ಲಕ್ಷಕ್ಕೂ ಹೆಚ್ಚು 'ಡಿಸ್ ಲೈಕ್ಸ್' ಗಳಿಸಿದೆ ಎಂದು ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನೇತ್ ವ್ಯಂಗ್ಯವಾಡಿದ್ದಾರೆ.

ಬಾಲಿವುಡ್ ನಟರಾದ ವರುಣ್ ಧವನ್, ರಾಜ್‌ಕುಮಾರ್ ರಾವ್, ಅರ್ಷದ್ ವಾರ್ಸಿ ಹಾಗೂ ವಿಕ್ರಾಂತ್ ಮಾಸ್ಸಿ ಈ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 2 ನಿಮಿಷ 55 ಸೆಕೆಂಡ್ ದೀರ್ಘವುಳ್ಳ ಈ ಹಾಡನ್ನು ಮೀಟ್ ಬ್ರದರ್ಸ್ ಸಂಯೋಜಿಸಿದ್ದು, ನದಾನ್ ಸಾಹಿತ್ಯ ಬರೆದಿದ್ದಾರೆ. ಮೀಟ್ ಬ್ರದರ್ಸ್, ಆದರ್ಶ ಶುಕ್ಲಾ ಮತ್ತು ದಿವ್ಯಾ ಭಟ್ ಹಿನ್ನೆಲೆ ಗಾಯನದಲ್ಲಿ ಮೂಡಿಬಂದಿದೆ.

ಅಕ್ಟೋಬರ್ 17ರ ಮದ್ಯಾಹ್ಯ ವೇಳೆಗೆ ಈ ವೀಡಿಯೊ 19 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 24,000 ಕ್ಕೂ ಹೆಚ್ಚು ಲೈಕ್ ಗಳನ್ನು ದಾಖಲಿಸಿಕೊಂಡಿತ್ತು.

ವೀಡಿಯೊಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್, “‘ಮೋದಿ ಹೈ ತೋ ಮುಮ್ಕಿನ್ ಹೈ’ ಹಾಡು ಮುಜುಗರಕ್ಕೆ ಕಾರಣವಾಗಿದೆ ಸಹೋದರರೇ. ಇದನ್ನು 16 ಲಕ್ಷ ಮಂದಿ ವೀಕ್ಷಿಸಿದ್ದಾರೆ. 13,000 ಮಂದಿ ಲೈಕ್ ಮಾಡಿದ್ದಾರೆ. 1 ಲಕ್ಷ ಮಂದಿ ಡಿಸ್ ಲೈಕ್ ಮಾಡಿದ್ದಾರೆ. ಕಾಮೆಂಟ್‌ಗಳನ್ನು ಕೇಳಬೇಡಿ!” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ರಾಜಕೀಯ ಪ್ರಚಾರವೆಂದು ಆರೋಪಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ನಟರನ್ನು “ಬೆನ್ನುಮೂಳೆಯಿಲ್ಲದವರು” ಎಂದು ಕರೆದರೆ, ಇತರರು ಪ್ರಧಾನಿಯವರನ್ನು ಗುರಿಯಾಗಿಸಿಕೊಂಡು “ಸ್ವಾರ್ಥಪರದ ನಾಯಕತ್ವ” ಎಂದು ಟೀಕಿಸಿದ್ದಾರೆ.

“ಧನ್ಯವಾದಗಳು ಮೋದಿ ಜಿ. ಈಗ ಯಾವ ಚಿತ್ರಗಳನ್ನು ಬಹಿಷ್ಕರಿಸಬೇಕು ಮತ್ತು ಯಾವವನ್ನು ರಾಷ್ಟ್ರಹಿತಕ್ಕಾಗಿ ಬೆಂಬಲಿಸಬೇಕು ಎಂಬುದು ಸ್ಪಷ್ಟವಾಗಿದೆ” ಎಂದು ಒಬ್ಬ ಬಳಕೆದಾರ ಯೂಟ್ಯೂಬ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಜನರು ಕೊನೆಗೂ ವಾಸ್ತವಕ್ಕೆ ಎಚ್ಚರಗೊಳ್ಳುತ್ತಿದ್ದಾರೆ” ಎಂದು ಕಮೆಂಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News