×
Ad

ಹಿಂಸಾಪೀಡಿತ ಬಾಂಗ್ಲಾದಿಂದ ಸ್ವದೇಶಕ್ಕೆ ಮರಳಿದ 4500ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು

Update: 2024-07-22 11:12 IST

PC: x.com/ndtv

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿಯನ್ನು ವಿರೋಧಿಸಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರ ನೂರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ಬೆನ್ನಲ್ಲೇ ಆ ದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ತೆರಳಿರುವ 4500 ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸಾಗಿದ್ದಾರೆ.

ನೇಪಾಳದ 500 ವಿದ್ಯಾರ್ಥಿಗಳು, ಭೂತಾನದ 38 ವಿದ್ಯಾರ್ಥಿಗಳು ಹಾಗೂ ಮಾಲ್ದೀವ್ಸ್‌ನ ಒಬ್ಬ ವಿದ್ಯಾರ್ಥಿ ಕೂಡ ಭಾರತಕ್ಕೆ ವಾಪಸಾಗಿದ್ದಾರೆ.

ಬಾಂಗ್ಲಾದೇಶದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಗಾಗಿ ಅಲ್ಲಿನ ಸ್ಥಳೀಯಾಡಳಿತಗಳೊಂದಿಗೆ ಭಾರತೀಯ ಹೈಕಮಿಷನ್‌ ನಿರಂತರ ಸಂಪರ್ಕದಲ್ಲಿದೆ. ವಿದ್ಯಾರ್ಥಿಗಳ ಸುರಕ್ಷಿತ ವಾಪಸಾತಿಗಾಗಿ ಏರ್ಪಾಡುಗಳನ್ನು ಮಾಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News