×
Ad

Punjab | ಜಿಲ್ಲಾ ಪರಿಷದ್, ಪಂಚಾಯತ್ ಚುನಾವಣೆ: AAP ಮೇಲುಗೈ

Update: 2025-12-18 21:34 IST

Photo Credit : PTI 

ಚಂಡಿಗಡ,ಡಿ.18: ಪಂಜಾಬಿನಲ್ಲಿ ಜಿಲ್ಲಾ ಪರಿಷದ್‌ಗಳು ಮತ್ತು ಪಂಚಾಯತ್ ಸಮಿತಿಗಳಿಗೆ ನಡೆದಿದ್ದ ಚುನಾವಣೆಗಳ ಫಲಿತಾಂಶಗಳು ಗುರುವಾರ ಪ್ರಕಟಗೊಂಡಿದ್ದು,ಆಪ್ ಭರ್ಜರಿ ಗೆಲುವನ್ನು ಸಾಧಿಸಿದೆ.

22 ಜಿಲ್ಲಾ ಪರಿಷದ್‌ಗಳ 346 ವಲಯಗಳು ಮತ್ತು 153 ಪಂಚಾಯತ್ ಸಮಿತಿಗಳ 2,838 ವಲಯಗಳಿಗೆ ಸದಸ್ಯರ ಆಯ್ಕೆಗಾಗಿ ಡಿ.8ರಂದು ಚುನಾವಣೆಗಳು ನಡೆದಿದ್ದವು.

ಜಿಲ್ಲಾ ಪರಿಷದ್ ಚುನಾವಣೆಯಲ್ಲಿ ಆಪ್ 218,ಕಾಂಗ್ರೆಸ್ 62,ಶಿರೋಮಣಿ ಅಕಾಲಿ ದಳ (ಎಸ್‌ಎಡಿ) 46, ಬಿಜೆಪಿ 7, ಬಿಎಸ್‌ಪಿ 3 ಮತ್ತು ಐಎನ್‌ಡಿ 10 ವಲಯಗಳಲ್ಲಿ ಗೆಲುವು ಸಾಧಿಸಿವೆ.

ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಆಪ್ 1531, ಕಾಂಗ್ರೆಸ್ 612, ಎಸ್‌ಎಡಿ 445, ಬಿಜೆಪಿ 73, ಬಿಎಸ್‌ಪಿ 28 ಮತ್ತು ಐಎನ್‌ಡಿ 144 ವಲಯಗಳಲ್ಲಿ ಗೆದ್ದಿವೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು, ಚುನಾವಣೆಗಳಲ್ಲಿ ಆಪ್‌ನ ಭರ್ಜರಿ ಗೆಲುವು ಗ್ರಾಮೀಣ ಪ್ರದೇಶಗಳ ಜನರು ಭಗವಂತ್ ಮಾನ್ ಸರಕಾರದ ಕೆಲಸಗಳನ್ನು ಮೆಚ್ಚಿಕೊಂಡಿದ್ದಾರೆ ಎನ್ನುವುದನ್ನು ತೋರಿಸಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News