×
Ad

ಜಾರ್ಖಂಡ್ ನಲ್ಲಿ ಅಚ್ಚರಿ ಮೂಡಿಸಿದ ಆರ್ ಜೆಡಿ: ಸ್ಪರ್ಧಿಸಿದ್ದ ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಮುನ್ನಡೆ

Update: 2024-11-23 13:46 IST

PC : PTI 

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ಅಭ್ಯರ್ಥಿಗಳು ಸ್ಪರ್ಧಿಸಿದ್ದ ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಅಚ್ಚರಿಯೆಂಬಂತೆ ಮುನ್ನಡೆಯನ್ನು ಸಾಧಿಸಿದೆ.

ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿನ ಫಲಿತಾಂಶದ ಪ್ರಕಾರ, ಐದು ಕ್ಷೇತ್ರಗಳಲ್ಲಿ ಹಾಲಿ ಬಿಜೆಪಿ ಶಾಸಕರನ್ನು ಹಿಂದಿಕ್ಕಿ ರಾಷ್ಟ್ರೀಯ ಜನತಾ ದಳದ ಅಭ್ಯರ್ಥಿಗಳು ಮುನ್ನಡೆಯನ್ನು ಸಾಧಿಸಿದ್ದಾರೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ನ ಛತ್ರ ಕ್ಷೇತ್ರದಲ್ಲಿ ಆರ್‌ ಜೆಡಿಯ ಸತ್ಯಾನಂದ ಭೋಕ್ತಾ ಗೆಲುವನ್ನು ಸಾಧಿಸಿದ್ದರು. ದಿಯೋಘರ್ನಲ್ಲಿ ಆರ್‌ ಜೆಡಿಯ ಸುರೇಶ್ ಪಾಸ್ವಾನ್ ಅವರು ಬಿಜೆಪಿಯ ಹಾಲಿ ಶಾಸಕ ನಾರಾಯಣ ದಾಸ್ಗಿಂತ ವಿರುದ್ಧ 19,581 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಗೊಡ್ಡಾ ಕ್ಷೇತ್ರದಲ್ಲಿ ಆರ್‌ ಜೆಡಿಯ ಸಂಜಯ್ ಪ್ರಸಾದ್ ಯಾದವ್ ಬಿಜೆಪಿ ಶಾಸಕ ಅಮಿತ್ ಕುಮಾರ್ ಮಂಡಲ್ ಅವರಿಗಿಂತ 19,867 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕೊಡೆರ್ಮಾದಲ್ಲಿ ಆರ್‌ ಜೆಡಿ ಅಭ್ಯರ್ಥಿ ಸುಭಾಷ್ ಪ್ರಸಾದ್ ಯಾದವ್ ಅವರು ಬಿಜೆಪಿಯ ಹಾಲಿ ಶಾಸಕಿ ನೀರಾ ಯಾದವ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News