×
Ad

ರೈಲಿನಲ್ಲಿ ಬೆಂಕಿ ವದಂತಿ | ಜೀವ ರಕ್ಷಣೆಗೆ ಬೋಗಿಯಿಂದಿಳಿದವರ ಮೇಲೆ ಹರಿದ ಮತ್ತೊಂದು ರೈಲು ; ಕನಿಷ್ಠ 12 ಮೃತ್ಯು, ಹಲವರಿಗೆ ಗಾಯ

Update: 2024-02-28 21:45 IST

Photo: X \ @airnewsalerts

ರಾಂಚಿ : ಜಾರ್ಖಂಡ್‌ನ ಜಮ್ತಾರಾದ ಕಾಲಜಾರಿಯಾ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಬಿದ್ದಿರುವ ವದಂತಿಯಿಂದ, ಜೀವರಕ್ಷಣೆಗೆ ಬೋಗಿಯಿಂದಿಳಿದು ಹಳಿದಾಟುವ ಯತ್ನದಲ್ಲಿದ್ದ ಪ್ರಯಾಣಿಕರ ಮೇಲೆ ಮತ್ತೊಂದು ರೈಲು ಹರಿದ ಪರಿಣಾಮ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಎಂದು ಆಲ್ ಇಂಡಿಯಾ ರೇಡಿಯೋ ವರದಿ ಮಾಡಿದೆ.

ಭಾಗಲ್ಪುರದಿಂದ ಬೆಂಗಳೂರಿಗೆ ಸಂಚರಿಸುವ ಅಂಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ವದಂತಿಯಿಂದ ತಪಾಸಣೆಗಾಗಿ ನಿಲ್ಲಿಸಲಾಗಿತ್ತು. ಈ ಸಂದರ್ಭ ಪ್ರಯಾಣಿಕರು ವದಂತಿಯಿಂ ಭಯಭೀತರಾಗಿ ರೈಲಿನಿಂದ ಇಳಿದಿದ್ದಾರೆ ಎನ್ನಲಾಗಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಅವರು ಹಳಿಗಳ ಮೇಲೆ ಓಡಲು ಪ್ರಯತ್ನಿಸಿದಾಗ, ಮಾರ್ಗದಲ್ಲಿ ಚಲಿಸುತ್ತಿದ್ದ ಮತ್ತೊಂದು ರೈಲು ಅವರ ಮೇಲೆ ಹರಿಯಿತು ಎಂದು ತಿಳಿದು ಬಂದಿದೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಜಮ್ತಾರಾಕ್ಕೆ ಕರೆತರಲು ವೈದ್ಯಕೀಯ ತಂಡಗಳು, ನಾಲ್ಕು ಆಂಬ್ಯುಲೆನ್ಸ್‌ಗಳು ಮತ್ತು ಮೂರು ಬಸ್‌ಗಳು ಸ್ಥಳಕ್ಕೆ ಧಾವಿಸಲಾಗಿದೆ ಎಂದು ಜಮ್ತಾರಾ ಉಪ ಆಯುಕ್ತರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಸ್ಥಳವು ಜಿಲ್ಲಾ ಕೇಂದ್ರದಿಂದ 15 ಕಿಮೀ ದೂರದಲ್ಲಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News