ಸನಾತನ ಧರ್ಮ ಕುರಿತು ಹೇಳಿಕೆ: ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ ಎಫ್ಐಆರ್
Update: 2023-09-13 21:18 IST
ಉದಯನಿಧಿ ಸ್ಟಾಲಿನ್ | Photo: PTI
ಮುಂಬೈ: ಸನಾತನ ಧರ್ಮ ಕುರಿತು ಹೇಳಿಕೆಗಾಗಿ ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಇಲ್ಲಿಯ ಮೀರಾ ರೋಡ್ ಪೋಲಿಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸನಾತನ ಧರ್ಮದ ಕುರಿತು ಹೇಳಿಕೆಗಾಗಿ ಸ್ಟಾಲಿನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ತಮಿಳುನಾಡು ಬಿಜೆಪಿ ಘಟಕವು ಮಂಗಳವಾರ ರಾಜ್ಯ ಪೊಲೀಸರಿಗೆ ಜ್ಞಾಪಕ ಪತ್ರವನ್ನು ಹಸ್ತಾಂತರಿಸಿತ್ತು. ಸೆ.2ರಂದು ಚೆನ್ನೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಂದರ್ಭ ಸ್ಟಾಲಿನ್,‘ಸನಾತನ ಧರ್ಮದ ಮೂಲೋತ್ಪಾಟನೆ ನಮ್ಮ ಮೊದಲ ಆದ್ಯತೆಯಾಗಬೇಕು ’ ಎಂದು ಹೇಳಿದ್ದರು. ಅವರ ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿ ವಿವಾದವನ್ನು ಸೃಷ್ಟಿಸಿದೆ.