×
Ad

ವಿದ್ಯಾರ್ಥಿ ಆತ್ಮಹತ್ಯೆಗಳ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆಯೇ?: ಸುಪ್ರೀಂ ಕೋರ್ಟ್

Update: 2025-05-06 21:47 IST

ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ,: ಐಐಟಿ ಕರಗಪುರ ವಿದ್ಯಾರ್ಥಿಯ ಆತ್ಮಹತ್ಯೆ ಮತ್ತು ರಾಜಸ್ಥಾನದ ಕೋಟದಲ್ಲಿ ನೀಟ್ ಆಕಾಂಕ್ಷಿಯ ಆತ್ಮಹತ್ಯೆಯ ಬಳಿಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆಯೇ ಎಂಬುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದೆ.

ಎರಡೂ ಸ್ಥಳಗಳಿಂದ ಸಾಧ್ಯವಿರುವಷ್ಟು ಬೇಗ ವರದಿಗಳನ್ನು ಪಡೆದುಕೊಳ್ಳುವಂತೆ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠವೊಂದು ತನ್ನ ಕಾರ್ಯಾಲಯಕ್ಕೆ ನಿರ್ದೇಶನ ನೀಡಿತು.

ಐಐಟಿ ಕರಗಪುರದಲ್ಲಿ ಕಲ್ಲಿಯುತ್ತಿದ್ದ 22 ವರ್ಷದ ವಿದ್ಯಾರ್ಥಿಯೊಬ್ಬರು 2025 ಮೇ 4ರಂದು ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿತು.

‘‘ಮೃತರು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಅವರ ದೇಹವು ಮದನ್ ಮೋಹನ ಮಾಳವೀಯ ಹಾಲ್‌ ನಲ್ಲಿರುವ ಕೋಣೆಯೊಂದರಲ್ಲಿ ನೇತಾಡುತ್ತಿತ್ತು. ಮೃತ ವಿದ್ಯಾರ್ಥಿಯನ್ನು ಬಿಹಾರದ ಶೆವಹರ್ ಜಿಲ್ಲೆಯ ಮುಹಮ್ಮದ್ ಆಸಿಫ್ ಖಮರ್ ಎಂಬುದಾಗಿ ಗುರುತಿಸಲಾಗಿದೆ’’ ಎಂದು ನ್ಯಾಯಾಲಯ ಹೇಳಿತು.

‘‘ನೇಣಿಗೆ ಕೊರಳೊಡ್ಡುವ ಕೆಲವೇ ಕ್ಷಣಗಳ ಮೊದಲು ಅವರು ದಿಲ್ಲಿಯಲ್ಲಿರುವ ತನ್ನ ಸ್ನೇಹಿತನ ಜೊತೆ ವೀಡಿಯೊ ಕರೆಯಲ್ಲಿದ್ದರು. ವಿದ್ಯಾರ್ಥಿಗಳ ಇಂಥ ಆತ್ಮಹತ್ಯೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ನಾವೊಂದು ಕಾರ್ಯಪಡೆಯನ್ನು ರಚಿಸಿದ್ದೆವು’’ ಎಂದು ಅದು ಹೇಳಿತು.

ಸುಪ್ರೀಂ ಕೋರ್ಟ್‌ನ ಹಿಂದಿನ ನಿರ್ದೇಶನಗಳಿಗೆ ಅನುಗುಣವಾಗಿ ಐಐಟಿ ಕರಗಪುರದ ಆಡಳಿತವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆಯೇ ಎನ್ನುವುದನ್ನು ಪರಿಶೀಲಿಸುವುದಕ್ಕಾಗಿ ತಾನು ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತಿರುವುದಾಗಿ ಅದು ತಿಳಿಸಿತು.

ನ್ಯಾಯಾಲಯವು ನೀಟ್ ಆಕಾಂಕ್ಷಿಯ ಆತ್ಮಹತ್ಯೆ ಪ್ರಕರಣವನ್ನೂ ಗಣನೆಗೆ ತೆಗೆದುಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News