ತಮಿಳುನಾಡು | ಅಕ್ರಮ ಕಲ್ಲು ಗಣಿಯಲ್ಲಿ ಸ್ಫೋಟ,ಇಬ್ಬರ ಮೃತ್ಯು
Update: 2024-08-21 20:24 IST
ಸಾಂದರ್ಭಿಕ ಚಿತ್ರ
ಈರೋಡ್ : ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿನ ಪರವಾನಿಗೆಯಿಲ್ಲದ ಖಾಸಗಿ ಕಲ್ಲು ಗಣಿಯೊಂದರಲ್ಲಿ ಮಂಗಳವಾರ ತಡರಾತ್ರಿ ಸ್ಫೋಟ ಸಂಭವಿಸಿದ್ದು, ಕರ್ನಾಟಕ ಮೂಲದ ಓರ್ವ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಮೃತ ವ್ಯಕ್ತಿಗಳು ಕಲ್ಲು ಗಣಿಯಲ್ಲಿ ಉದ್ಯೋಗಿಗಳಾಗಿದ್ದರು.
ಮೃತರಿಗೆ ಸಂತಾಪಗಳನ್ನು ಸೂಚಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಮೃತರ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ.