×
Ad

ವಿಬಿ-ಜಿ ರಾಮ್ ಜಿ ವಿರುದ್ಧ ನಿರ್ಣಯ ಅಂಗೀಕರಿಸಿದ ತೆಲಂಗಾಣ ವಿಧಾನಸಭೆ

Update: 2026-01-03 23:00 IST

ಎ.ರೇವಂತ ರೆಡ್ಡಿ | Photo Credit : PTI 

ಹೈದರಾಬಾದ್,ಜ.3: ತೆಲಂಗಾಣ ವಿಧಾನಭೆಯು ಮನರೇಗಾ ಕಾಯ್ದೆಯನ್ನು ಉಳಿಸಿಕೊಳ್ಳುವ ಮತ್ತು ಅದರ ಬದಲಿಗೆ ತರಲಾಗಿರುವ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ರದ್ದುಗೊಳಿಸುವ ನಿರ್ಣಯವೊಂದನ್ನು ಅಂಗೀಕರಿಸಿದೆ. ಪಂಜಾಬ್ ವಿಧಾನಸಭೆಯೂ ಡಿ.30ರಂದು ಇಂತಹುದೇ ನಿರ್ಣಯವನ್ನು ಅಂಗೀಕರಿಸಿತ್ತು.

ಹೊಸ ವಿಬಿ-ಜಿ ರಾಮ್ ಜಿ ಕಾಯ್ದೆಯು ಬಡವರಿಗೆ ಹಾನಿಕಾರಕವಾಗಿದೆ ಮತ್ತು ಅದು ಉದ್ಯೋಗ ಖಾತರಿ ಕಾಯ್ದೆಯ ಮೂಲ ಉದ್ದೇಶವನ್ನು ದುರ್ಬಲಗೊಳಿಸಿದೆ ಎಂದು ವಿಧಾನಸಭೆಯಲ್ಲಿ ಹೇಳಿದ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿಯವರು, ನೂತನ ಕಾಯ್ದೆಯು ಬೇಡಿಕೆಯನ್ನು ಆಧರಿಸಿ ಕೆಲಸದ ಯೋಜನೆಗಳನ್ನು ಸಿದ್ಧಗೊಳಿಸುವ ವ್ಯವಸ್ಥೆಯನ್ನು ಅಂತ್ಯಗೊಳಿಸಿದೆ. ಹಳೆಯ ಬೇಡಿಕೆ ಆಧಾರಿತ ವ್ಯವಸ್ಥೆಯೇ ಮುಂದುವರಿಯಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News