ಮ್ಯಾನ್ ಹೋಲ್ ಗೆ ಬಿದ್ದು ಇಬ್ಬರು ಪೌರಕಾರ್ಮಿಕರು ಮೃತ್ಯು
Update: 2023-06-25 08:12 IST
Photo: PTI
ಮುಂಬೈ: ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಮಳೆನೀರು ಚರಂಡಿ ವಿಭಾಗದ ಇಬ್ಬರು ಗುತ್ತಿಗೆ ಕಾರ್ಮಿಕರು ಭೂಗತ ಚರಂಡಿಯ ಮ್ಯಾನ್‌ಹೋಲ್ ಗೆ ಬಿದ್ದು ಮೃತಪಟ್ಟಿರುವ ಧಾರುಣ ಘಟನೆ ಶನಿವಾರ ಸಂಭವಿಸಿದೆ. ಗೊವಾಂಡಿಯ ಶಿವಾಜಿನಗರದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದ ವೇಳೆ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಬಿಎಂಸಿ ಪ್ರಕಟಣೆ ಹೇಳಿದೆ.
ಸ್ಥಳೀಯರು ಮುಂಬೈ ಅಗ್ನಿಶಾಮಕ ದಳಕ್ಕೆ ಈ ಮಾಹಿತಿ ನೀಡಿದ್ದಾರೆ. ಮೃತಪಟ್ಟವರನ್ನು ರಾಮಕೃಷ್ಣ (25) ಮತ್ತು ಸುಧೀರ್ ದಾಸ್ (30) ಎಂದು ಗುರಿಸಲಾಗಿದೆ. ರಾಜವಾಡಿ ಆಸ್ಪತ್ರೆಗೆ ಕರೆತರುವ ಮುನ್ನವೇ ಇಬ್ಬರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.