×
Ad

ಪಿಎಂಕೆಎಸ್‌ವೈ:1,920 ಕೋಟಿ ರೂ.ಹೆಚ್ಚುವರಿ ಬಜೆಟ್ ಹಂಚಿಕೆಗೆ ಕೇಂದ್ರ ಸಂಪುಟದ ಅಸ್ತು

Update: 2025-07-31 21:58 IST

PC : pmksy.gov.in

ಹೊಸದಿಲ್ಲಿ,ಜು.31: ಕೇಂದ್ರ ಸಂಪುಟವು ಆಹಾರ ಸಂಸ್ಕರಣಾ ಕ್ಷೇತ್ರವನ್ನು ಉತ್ತೇಜಿಸಲು ಗುರುವಾರ ಪ್ರಧಾನ ಮಂತ್ರಿ ಕಿಸಾನ್ಸಂಪದ ಯೋಜನೆ(ಪಿಎಂಕೆಎಸ್‌ವೈ)ಗಾಗಿ ಬಜೆಟ್ ಅನುದಾನವನ್ನು 1,920 ಕೋ.ರೂ.ಗಳಷ್ಟು ಹೆಚ್ಚಿಸಿದ್ದು, ಇದರೊಂದಿಗೆ ಒಟ್ಟು ಅನುದಾನ ಮೊತ್ತ 6,520 ಕೋ.ರೂ.ಗಳಿಗೆ ತಲುಪಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಒದಗಿಸಲಾಗುವ ಹೆಚ್ಚುವರಿ ಮೊತ್ತವನ್ನು 50 ಬ ಹುಆಹಾರ ವಿಕಿರಣ ಘಟಕಗಳು ಮತ್ತು 100 ಆಹಾರ ಪರೀಕ್ಷಾ ಪ್ರಯೋಗಾಲಗಳಿಗೆ ಬಳಸಲಾಗುವುದು.

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

2017ರಲ್ಲಿ ಆರಂಭಿಸಲಾದ ಪಿಎಂಕೆಎಸ್‌ವೈ ಅನ್ನು 4,600 ಕೋ.ರೂ.ಗಳ ಬಜೆಟ್ ಅನುದಾನದೊಂದಿಗೆ ವಿತ್ತವರ್ಷ 2025-26ರ ಅಂತ್ಯದವರೆಗೆ ವಿಸ್ತರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News