×
Ad

ಉತ್ತರ ಪ್ರದೇಶ | ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯನಿಂದ ನೃತ್ಯ ಶಿಕ್ಷಕಿಗೆ ಅತ್ಯಾಚಾರ, ಕೊಲೆ ಬೆದರಿಕೆ

Update: 2024-11-13 22:00 IST

ಲಾರೆನ್ಸ್ ಬಿಷ್ಣೋಯಿ | PC : PTI 

ಬಸ್ತಿ : ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯನೆಂದು ಶಂಕಿಸಲಾದ ವ್ಯಕ್ತಿಯಿಂದ ಅತ್ಯಾಚಾರ ಹಾಗೂ ಕೊಲೆ ಬೆದರಿಕೆಯ ಕರೆ ಸ್ವೀಕರಿಸಲಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶ ಜಿಲ್ಲೆಯೊಂದರ ನೃತ್ಯ ಶಿಕ್ಷಕಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯನೆಂದು ಪ್ರತಿಪಾದಿಸಿದ ವ್ಯಕ್ತಿಯೋರ್ವ ಫೋನ್ ಮೂಲಕ ‘‘ತಾನು ಈಗಾಗಲೇ 25 ಮಹಿಳೆಯರ ಅತ್ಯಾಚಾರ ಎಸಗಿ ಹತ್ಯೆಗೈದಿದ್ದೇನೆ. ಮುಂದಿನ ಟಾರ್ಗೆಟ್ ನೀವು’’ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ನೃತ್ಯ ಶಿಕ್ಷಕಿ ದೂರಿನಲ್ಲಿ ಆರೋಪಿಸಿದ್ದಾರೆ.

ಬಸ್ತಿ ಸದರ್ ಕೊಟ್ವಾಲಿ ಪ್ರದೇಶದ ಜನಪ್ರಿಯ ನೃತ್ಯ ಶಿಕ್ಷಕಿಯಾಗಿರುವ ಈ ಮಹಿಳೆ ನೃತ್ಯದ ಕುರಿತ ಬೋಧನೆಯನ್ನು ಯುಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಬೆದರಿಕೆ ಒಡ್ಡಿದ ವ್ಯಕ್ತಿ ಕರೆ ಮಾಡಲು ಹಲವು ದೂರವಾಣಿ ಸಂಖ್ಯೆಗಳನ್ನು ಬಳಸುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ.

‘‘ಬೆದರಿಕೆ ಕುರಿತಂತೆ ನಾವು ನೃತ್ಯ ಶಿಕ್ಷಕಿಯಿಂದ ದೂರು ಸ್ವೀಕರಿಸಿದ್ದೇವೆ. ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಯುತ್ತಿದೆ’’ ಎಂದು ಸರ್ಕಲ್ ಆಫಿಸರ್ ಸಂತೇಂದ್ರ ಭೂಷಣ್ ತಿವಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News