×
Ad

ಉತ್ತರ ಪ್ರದೇಶ: ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಬಲಿ

Update: 2024-11-16 20:35 IST

ಸಾಂದರ್ಭಿಕ ಚಿತ್ರ 

 

ಬಿಜನೋರ್: ಉತ್ತರ ಪ್ರದೇಶದ ಬಿಜನೋರ್ ಸಮೀಪ ಶನಿವಾರ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಜಾರ್ಖಂಡ್‌ನಿಂದ ಹಿಂತಿರುಗುತ್ತಿದ್ದ ನವದಂಪತಿ ಸೇರಿದಂತೆ ಏಳು ಮಂದಿ ಸಾವನ್ನಪಿದ್ದಾರೆ.

ಡೆಹ್ರಾಡೂನ್-ನೈನಿತಾಲ್ ಹೆದ್ದಾರಿಯಲ್ಲಿರುವ ಧಾಮಪುರದಲ್ಲಿ ಶನಿವಾರ ನಸುಕಿನಲ್ಲಿ 2:00 ಗಂಟೆಗೆ ಕಾರೊಂದು ಢಿಕ್ಕಿ ಹೊಡೆದ ಬಳಿಕ ರಸ್ತೆಯಿಂದ ಜಾರಿದ ಟೆಂಪೊ ವಿದ್ಯುತ್ ಕಂಬವೊಂದಕ್ಕೆ ಬಡಿದಿದೆ. ಅವಘಡದ ತೀವ್ರತೆಗೆ ಚಾಲಕ ಸೇರಿದಂತೆ ಟೆಂಪೊದಲ್ಲಿದ್ದ ಏಳು ಮಂದಿಯೂ ರಸ್ತೆಗೆಸೆಯಲ್ಪಟ್ಟಿದ್ದು, ಅವರಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಾಲಕ ಅಜಬ್ ಸಿಂಗ್ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಅಸುನೀಗಿದ್ದಾರೆ. ಟೆಂಪೊದಲ್ಲಿದ್ದ ಆರು ಮಂದಿ ಒಂದೇ ಕುಟುಂಬದವರಾಗಿದ್ದು, ಜಾರ್ಖಂಡ್‌ನಲ್ಲಿವಿವಾಹ ಕಾರ್ಯಕ್ರಮ ಮುಗಿಸಿಕೊಂಡು ನವದಂಪತಿಯೊಂದಿಗೆ ಹಿಂತಿರುಗುತ್ತಿದ್ದರು. ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳಿಗೂ ಗಾಯಗಳಾಗಿವೆಯೆಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News