×
Ad

ಚಹಾ ಮಾರುವ ರಜಿನಿಕಾಂತ್‌ರನ್ನು ನೋಡಿ ನಿಬ್ಬೆರಗಾದ ಅಭಿಮಾನಿಗಳು!

Update: 2023-10-24 17:24 IST

Photo : twitter

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿರುವ ವೆಂಕಟೇಶ್ವರ ಹೋಟೆಲ್ ಮಾಲಕ ಸುಧಾಕರ್ ಪ್ರಭು ರಾತ್ರೋರಾತ್ರಿ ಇಂಟರ್ ನೆಟ್ ಸೆನ್ಸೇಷನ್ ಆಗಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಹೋಲುವ ಸುಧಾಕರ್‌ ಹಾವಭಾವಕ್ಕೆ ಅಭಿಮಾನಿಗಳು ಬೆರಗಾಗಿದ್ದಾರೆ.

ಕೇರಳದ ಸ್ಟಾಲ್‌ನಲ್ಲಿ ಚಹಾ ಮಾರುತ್ತಿರುವ ಸುಧಾಕರ್ ರಜಿನಿಕಾಂತ್‌ ಅವರನ್ನು ಹೋಲುತ್ತಿದ್ದು, ಅವರ ವಿಡಿಯೋಗಳನ್ನು ನೆಟ್ಟಿಗರು ವೈರಲ್‌ ಮಾಡಿದ್ದಾರೆ. ಆರಂಭದಲ್ಲಿ ಕೆಲವರು ಸುಧಾಕರ್‌ ಅವರನ್ನು ನಿಜವಾದ ರಜಿನಿಕಾಂತ್‌ ಎಂದೇ ಭಾವಿಸಿದ್ದು, ಚಿತ್ರೀಕರಣಕ್ಕಾಗಿ ಕೊಚ್ಚಿಗೆ ಬಂದಿದ್ದಾರೆ ಎಂದು ಅಂದುಕೊಂಡಿದ್ದರು.

ಮಲಯಾಳಂ ಚಿತ್ರ ನಿರ್ದೇಶಕ ನಾದಿರ್ ಶಾ ಅವರು ಸುಧಾಕರ್‌ ಕುರಿತ ವಿಡಿಯೋ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ನಂತರ ಅವರ ವೀಡಿಯೊಗಳು ಹೆಚ್ಚಿನ ಜನರನ್ನು ತಲುಪಿದೆ. ಅಂದಿನಿಂದ, ಸುಧಾಕರ್ ಜನಪ್ರಿಯತೆಯನ್ನು ಗಳಿಸಿದ್ದು, ಕೇರಳದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಸಹ ಆಹ್ವಾನಿಸಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News