×
Ad

ಭಾರತದಿಂದ ಕಳ್ಳಸಾಗಣೆಯಾದ 297 ಪುರಾತನ ವಸ್ತುಗಳ ಹಸ್ತಾಂತರಕ್ಕೆ ಅಮೆರಿಕ ಸಮ್ಮತಿ

Update: 2024-09-22 12:54 IST

Photo:X/@narendramodi

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದು, ಭಾರತದಿಂದ ಕಳ್ಳಸಾಗಣೆಯಾದ 297 ಪುರಾತನ ವಸ್ತುಗಳನ್ನು ಶೀಘ್ರದಲ್ಲೇ ಭಾರತಕ್ಕೆ ಹಿಂದಿರುಗಿಸುವುದಾಗಿ ಅಮೆರಿಕ ಹೇಳಿದೆ ಎಂದು The Indian Express ವರದಿ ಮಾಡಿದೆ.

ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಜೋ ಬೈಡನ್ ಅವರಿಗೆ ದ್ವಿಪಕ್ಷೀಯ ಸಭೆಯ ವೇಳೆ ಭಾರತದಿಂದ ಕಳ್ಳಸಾಗಣೆಯಾದ ಕೆಲವು ಪುರಾತನ ವಸ್ತುಗಳನ್ನು ಪ್ರದರ್ಶನ ಮಾಡಲಾಗಿದೆ. ಈ ಕಲಾಕೃತಿಗಳನ್ನು ಹಿಂದಿರುಗಿಸುವಲ್ಲಿ ನೀಡಿದ ಸಹಕಾರಕ್ಕೆ ಪ್ರಧಾನಿ ಮೋದಿ ಬೈಡನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ʼಸಾಂಸ್ಕೃತಿಕ ಬಾಂಧವ್ಯ ಗಟ್ಟಿಗೊಳಿಸುವುದು ಮತ್ತು ಸಾಂಸ್ಕೃತಿಕ ಆಸ್ತಿಗಳ ಅಕ್ರಮ ಕಳ್ಳಸಾಗಣೆ ವಿರುದ್ಧ ಹೋರಾಟ ಬಲಪಡಿಸುವ ನಿಟ್ಟಿನಲ್ಲಿ 297 ಬೆಲೆಬಾಳುವ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸುವುದನ್ನು ಖಾತ್ರಿಪಡಿಸಿದ ಅಧ್ಯಕ್ಷ ಬೈಡನ್ ಮತ್ತು ಯುಎಸ್ ಸರ್ಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಪುರಾತನ ವಸ್ತುಗಳ ಕಳ್ಳ ಸಾಗಣೆ ತಡೆಯಲು ಮತ್ತು ಅವುಗಳನ್ನು ಮೂಲ ದೇಶಕ್ಕೆ ಹಿಂದಿರುಗಿಸುವ ಸಲುವಾಗಿ ಭಾರತ ಹಾಗೂ ಅಮೆರಿಕ, ಜುಲೈ ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಕಾಲಾಕೃತಿಗಳಲ್ಲಿ ಹೆಚ್ಚಿನವು ಪೂರ್ವ ಭಾರತದಿಂದ ತಂದ ಟೆರಾಕೋಟಾ ಕಲಾಕೃತಿಗಳಾಗಿವೆ. ಅವುಗಳನ್ನು ಕಲ್ಲು, ಲೋಹ, ಮರಗಳಿಂದ ತಯಾರಿಸಲಾಗಿತ್ತು. ಹಿಂದಿರುಗಿಸಲಾದ ಕಲಾಕೃತಿಗಳಲ್ಲಿ ಮಧ್ಯ ಕಾಲೀನ ಭಾರತದ 10-11ನೇ ಶತಮಾನದ CE ಗೆ ಸೇರಿದ ಸ್ಟ್ಯಾಂಡ್ ಸ್ಟೋನ್ ಅಪ್ಸರಾ, 15-16 ನೇ ಶತಮಾನದ ಕಂಚಿನ ಜೈನ ತೀರ್ಥಂಕರರ ಕಲಾಕೃತಿ ಸೇರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News