×
Ad

ಬಸ್‌ನಿಂದ ತಲೆ ಹೊರಹಾಕಿದ ಮಹಿಳೆ, ಮತ್ತೊಂದು ವಾಹನಕ್ಕೆ ತಲೆ ಜಜ್ಜಿ ಮೃತ್ಯು

ವಾಂತಿ ಮಾಡಲು ಬಸ್ ಕಿಟಕಿಯಿಂದ ತಲೆ ಹೊರ ಹಾಕಿದ ಮಹಿಳೆ ಓವರ್ ಟೇಕ್‌ ಮಾಡಲು ಬಂದ ಅಪರಿಚಿತ ವಾಹನದ ಮಧ್ಯೆ ಸಿಲುಕಿಕೊಂಡು, ತಲೆ ಜಜ್ಜಿ ಪ್ರಾಣ ಕಳೆದುಕೊಂಡ ಭೀಕರ ಘಟನೆ

Update: 2023-08-30 23:55 IST

PHOTO : NDTV

ಹೊಸದಿಲ್ಲಿ : ವಾಂತಿ ಮಾಡಲು ಬಸ್ ಕಿಟಕಿಯಿಂದ ತಲೆ ಹೊರ ಹಾಕಿದ ಮಹಿಳೆ ಓವರ್ ಟೇಕ್‌ ಮಾಡಲು ಬಂದ ಅಪರಿಚಿತ ವಾಹನದ ಮಧ್ಯೆ ಸಿಲುಕಿಕೊಂಡು, ತಲೆ ಜಜ್ಜಿ ಪ್ರಾಣ ಕಳೆದುಕೊಂಡ ಭೀಕರ ಘಟನೆ ಹೊಸದಿಲ್ಲಿಯಲ್ಲಿ ವರದಿಯಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮಹಿಳೆ ಪ್ರಯಾಣಿಸುತ್ತಿದ್ದ ಹರಿಯಾಣ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಹೊಸದಿಲ್ಲಿಯ ಹೊರವಲಯದ ಅಲಿಪುರದಲ್ಲಿ ಸಂಚರಿಸುವಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತ ಮಹಿಳೆಯನ್ನು ಉತ್ತರಪ್ರದೇಶದ ಪ್ರತಾಪಗಡದ ನಿವಾಸಿ ೨೦ ವರ್ಷ ವಯಸ್ಸಿನ ಬಬ್ಲಿ ಎಂದು ಗುರುತಿಸಲಾಗಿದೆ. ಕಾಶ್ಮೀರ ಗೇಟ್ ನಿಂದ ಕುಟುಂಬ ಸದಸ್ಯರೊಂದಿಗೆ ಲೂಧಿಯಾನಕ್ಕೆ ಪ್ರಯಾಣಿಸಲು ಮಹಿಳೆ ಬಸ್ ಏರಿದ್ದರು ಎನ್ನಲಾಗಿದೆ.

ವಾಂತಿ ಮಾಡಲು ತಲೆ ಹೊರಹಾಕಿದಾಗ, ಏಕಾಏಕಿ ಓವರ್ ಟೇಕ್ ಮಾಡಲು ಬಂದ ಅಪರಿಚಿತ ವಾಹನ ಢಿಕ್ಕಿ ಹೊಡೆದು, ತಲೆ ಜಜ್ಜಿದಾಗ ಸ್ಥಳದಲ್ಲೇ ಅಕೆ ಮೃತಪಟ್ಟಿದ್ದಾರೆ. ಆದರೆ ಅಪರಿಚಿತ ವಾಹನ ನಿಲ್ಲಸದೇ ಪರಾರಿಯಾಗಿದೆ. ಪೊಲೀಸರು ಢಿಕ್ಕಿ ಹೊಡೆದ ವಾಹನವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News