×
Ad

ಬಾಂಗ್ಲಾದಲ್ಲಿ ದೇವಾಲಯ ನೆಲಸಮಕ್ಕೆ ಭಾರತ ಖಂಡನೆ; ಅಕ್ರಮ ನಿರ್ಮಾಣವೆಂದ ಯೂನುಸ್ ಸರಕಾರ

Update: 2025-06-27 20:23 IST

 ಯೂನುಸ್ | PC : PTI  

ಢಾಕಾ: ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ದುರ್ಗಾದೇವಿ ದೇವಸ್ಥಾನದ ಧ್ವಂಸಗೊಳಿಸಿದ ಘಟನೆಯನ್ನು ಭಾರತವು ತೀವ್ರವಾಗಿ ಖಂಡಿಸಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆಯೆಂದು ಅದು ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಬಾಂಗ್ಲಾದೇಶದ ಅಧಿಕಾರಿಗಳು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಅದೊಂದು ಅಕ್ರಮವಾಗಿ ನಿರ್ಮಿಸಲಾದ ತಾತ್ಕಾಲಿ ಕಟ್ಟಡವಾಗಿತ್ತೆಂದು ಅವರು ಹೇಳಿದೆ.

ದೇವಾಲಯದ ನೆಲಸಮ ಕಾರ್ಯಾಚರಣೆಯನ್ನು ಬಾಂಗ್ಲಾ ರೈಲ್ವೆ ಇಲಾಖೆ ನಡೆಸಿದ್ದು, ಪೊಲೀಸರು ಹಾಗೂ ಮಿಲಿಟರಿ ಸಿಬ್ಬಂದಿ ನೆರವಾಗಿದ್ದರು. ದೇವಾಲಯವನ್ನು ತೆರವುಗೊಳಿಸಬೇಕೆಂದು ಗುಂಪುದೊಂದು ಆಗ್ರಹಿಸಿದ ಮೂರು ದಿನಗಳ ಬಳಿಕ ದೇವಾಲಯವನ್ನು ಕೆಡವಲಾಗಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ರಣಧೀರ್ ಜೈಸ್ವಾಲ್ ಅವರು, ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಢಾಕಾದ ಖಿಲ್‌ ಖೇಟ್‌ ನಲ್ಲಿರುವ ದುರ್ಗಾ ದೇವಾಲಯವನ್ನು ಧ್ವಂಸಗೊಳಿಸಬೇಕೆಂದು ತೀವ್ರವಾದಿಗಳು ಕೂಗಾಡುತ್ತಿದ್ದರೆಂಬುದು ನಮಗೆ ತಿಳಿದಿದೆ. ಬಾಂಗ್ಲಾದ ಮಧ್ಯಂತರ ಸಕಾರವು ದೇವಾಲಯಕ್ಕೆ ರಕ್ಷಣೆಯನ್ನು ನೀಡುವ ಬದಲು ಇಡೀ ಘಟನೆಯನ್ನು ಅಕ್ರಮ ಭೂ ಬಳಕೆಯ ಪ್ರಕರಣವೆಂದು ಬಿಂಬಿಸುತ್ತಿದೆ ಹಾಗೂ ಇಂದು ದೇವಾಲಯದ ಧ್ವಂಸಕ್ಕೆ ಅನುಮತಿಯನ್ನು ನೀಡಿದೆ ಎಂದು ಹೇಳಿದ್ದಾರೆ.

ದೇವಾಲಯದ ವಿಗ್ರಹವನ್ನು ಬೇರೆಡೆಗ ಸ್ಥಳಾಂತರಿಸುವ ಮುನ್ನವೇ ಅದಕ್ಕೆ ಹಾನಿಯಾಗಿದೆ. ಬಾಂಗ್ಲಾದೇಶದಲ್ಲಿ ಇಂತಹ ಘಟನೆಗಳು ಮರಕುಳಿಸುತ್ತಿರುವುದರಿಂದ ನಮಗೆ ಖೇದವಾಗಿದೆ. ಹಿಂದೂಗಳನ್ನು, ಅವರ ಆಸ್ತಿಪಾಸ್ತಿಗಳು ಹಾಗೂ ಧಾರ್ಮಿಕ ಸಂಸ್ಥೆಗಳನ್ನು ರಕ್ಷಿಸುವುದು ಬಾಂಗ್ಲಾ ಮಧ್ಯಂತರ ಸರಕಾರದ ಹೊಣೆಗಾರಿಕೆಯೆಂದು ನಾನು ಒತ್ತಿ ಹೇಳುತ್ತಿದ್ದೇನೆ ಎಂದು ಸಿಂಘ್ವಿ ತಿಳಿಸಿದ್ದಾರೆ.

ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರದ ಆಡಳಿತದಲ್ಲಿ ಬಾಂಗ್ಲಾದಲ್ಲಿ ಅಲ್ಪಸಂಖ್ಯಾರನ್ನು ಗುರಿಯಿರಿಸಿ ದಾಳಿಗಳು ನಡೆಯುತ್ತಿವೆಯೆಂದು ಭಾರತ ಸರಕಾರವು ಕಳವಳ ವ್ಯಕ್ತಪಡಿಸುತ್ತಲೇ ಬಂದಿದೆ. ಇತ್ತೀಚೆಗೆ ಥೈಲ್ಯಾಂಡ್‌ ನ ಬ್ಯಾಂಕಾಕ್‌ ನಲ್ಲಿ ನಡೆದ ಬಿಮ್‌ಎಸ್‌ಟಿಇಸಿ ಶೃಂಗಸಭೆಯ ಸಂದರ್ಭ, ಪ್ರಧಾನಿ ನರೇಂದ್ರ ಮೋದಿ ಅವರು ಬ ಯೂನುಸ್ ಜೊತೆ ಈ ವಿಷಯವನ್ನು ಪ್ರಸ್ತಾವಿಸಿದ್ದರು. ಅಲ್ಲದೆ ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯಗೆ ಸಂಬಂಧಿಸಿ ಭಾರತದ ಕಳವಳಗಳನ್ನು ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News