ಝುಬೀನ್ ಗರ್ಗ್ ಮೃತ್ಯು ಪ್ರಕರಣ | ಸಿಂಗಾಪುರ ತಲುಪಿದ ಅಸ್ಸಾಂ ಪೊಲೀಸರು
ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ಪ್ರಾಧಿಕಾರಗಳಿಂದ ಮಾಹಿತಿ ಪಡೆಯಲಿರುವ ಎಸ್ಐಟಿ
ಝುಬೀನ್ ಗರ್ಗ್ | PC : PTI
ಗುವಾಹಟಿ: ಕಳೆದ ತಿಂಗಳು ದ್ವೀಪ ರಾಷ್ಟ್ರವಾದ ಸಿಂಗಾಪುರದಲ್ಲಿ ಸಂಭವಿಸಿದ್ದ ಅಸ್ಸಾಂನ ಗಾಯಕ ಝುಬೀನ್ ಗರ್ಗ್ ಮೃತ್ಯು ಪ್ರಕರಣದ ತನಿಖೆಯ ಭಾಗವಾಗಿ ಇಬ್ಬರು ಹಿರಿಯ ಅಸ್ಸಾಂ ಪೊಲೀಸರು ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ.
ಝುಬೀನ್ ಗರ್ಗ್ ಸಾವಿನ ಕುರಿತು ಅಸ್ಸಾಂ ರಾಜ್ಯಾದ್ಯಂತ 60ಕ್ಕೂ ಹೆಚ್ಚು ಎಫ್ಐಆರ್ ಗಳು ದಾಖಲಾದ ನಂತರ, ಅಸ್ಸಾಂ ಅಪರಾಧ ತನಿಖಾ ವಿಭಾಗ(CID)ದಡಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.
ಅಪರಾಧ ತನಿಖಾ ವಿಭಾಗದ ವಿಶೇಷ ಡಿಜಿಪಿ ಮುನ್ನಾ ಪ್ರಸಾದ್ ಗುಪ್ತ ಹಾಗೂ ಟಿಟಬೋರ್ ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತರುಣ್ ಗೋಯಲ್ ಗುವಾಹಟಿಯಿಂದ ನೇರವಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶೇಷ ತನಿಖಾ ತಂಡದ ನೇತೃತ್ವವನ್ನು ಮುನ್ನಾ ಪ್ರಸಾದ್ ಗುಪ್ತ ವಹಿಸಿದ್ದು, ಒಂಭಬತ್ತು ಸದಸ್ಯರ ತಂಡದಲ್ಲಿ ತರುಣ್ ಗೋಯಲ್ ಓರ್ವ ಸದಸ್ಯರಾಗಿದ್ದಾರೆ.