ಲಂಕೇಶರಿಂದ ರಾಜ್ಯ ರಾಜಕೀಯಕ್ಕೆ ಹೊಸ ಆಯಾಮ’

Update: 2015-12-21 10:00 GMT

ಲಂಕೇಶ್ ಅವರು ಬದುಕಿದ್ದರೇ, ಅಸಹಿಷ್ಣುತೆಯ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತಿದ್ದರು ಎಂದು ರಂಗಕರ್ಮಿ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಬದಾಮಿ ಹೌಸ್‌ನಲ್ಲಿ ಜನಸಂಸ್ಕೃತಿ, ಅವಿರತ ಪುಸ್ತಕ, ಬೆಂಗಳೂರು ಆರ್ಟ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ಈಗ ಇರಬೇಕಿತ್ತು ಲಂಕೇಶ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಅವರು ಬದುಕಿದ್ದಾಗ ರಾಜಕೀಯ ಹಾಗೂ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ಬಂದಿತು. ಈಗ ಅವರೆನಾದರೂ ಬದುಕಿದ್ದರೇ, ಅಸಹಿಷ್ಣುತೆಯ ಬಗ್ಗೆಯೂ ಸ್ಪಷ್ಟತೆಯನ್ನು ನೀಡುತ್ತಿದ್ದರು ಎಂದು ಅಭಿಪ್ರಾಯಪಟ್ಟರು. ಲಂಕೇಶ್ ಅವರಿಗೆ ವಿಷಯಾಧಾರಿತವಾಗಿ ಚರ್ಚಿಸಿದರೆ ಎಷ್ಟು ಹೊತ್ತು ಬೇಕಾದರೂ ಚರ್ಚಿಸುತ್ತಿದ್ದರೂ ಆದರೆ ಅವರಿಗೆ ಜಾತಿ ಆಧಾರಿತವಾಗಿ ಮಾತನಾಡಿದರೆ ಅವರ ವಿರುದ್ಧ ಸಿಡಿಮಿಡಿಗೊಳ್ಳುತ್ತಿದ್ದರು ಎಂದು ಹೇಳಿದರು. ಕರ್ನಾಟಕ ಲಲಿತಕಲಾ ಅಕಾಡಮಿ ಅಧ್ಯಕ್ಷ ಎಂ.ಎಸ್.ಮೂರ್ತಿ ಮಾತನಾಡಿ, ಲಂಕೇಶ್ ಅವರು ಉತ್ತಮ ಬರಹಗಾರರಾಗಿದ್ದರೆ ವಿನಹ ಅವರು ಉತ್ತಮ ನಿರ್ದೇಶಕರಾಗಿರಲಿಲ್ಲ. ಆದರೂ ಅವರು ಹೊಸತನಕ್ಕೆ ತುಡಿಯುತ್ತಿದ್ದರು ಎಂದು ತಿಳಿಸಿದರು.


ಅವರು ಎಲ್ಲರನ್ನೂ ಅಧಿಕಾರಯುತವಾಗಿ ಕರೆಯುವ ಹಾಗೂ ಅವರನ್ನು ಅಪಾಯದ ಸುಳಿಗೆ ಸಿಲುಕಿಸುವುದನ್ನು ಕರಗತ ಮಾಡಿಕೊಂಡಿದ್ದರು. ಅಲ್ಲದೆ, ಕನ್ನಡ ಚಿತ್ರಗಳು ಇತರೆ ಭಾಷೆಗಳ ಚಿತ್ರಗಳಿಗಿಂತಲೂ ಉತ್ತಮವಾಗಿವೆ. ಆದರೆ, ಈ ಚಿತ್ರಗಳನ್ನು ವಿಮರ್ಶಿಸುವಲ್ಲಿ ಸೋತಿದ್ದೇವೆ ಎಂದು ಹೇಳಿದರು.
ಹೆಸರಾಂತ ನಿರ್ದೇಶಕರೂ ಅಸಲಿ ಚಿತ್ರಗಳನ್ನು ಕಾಫಿ ಹೊಡೆಯುತ್ತಿದ್ದು, ಇದರಿಂದ, ಸೃಜನಶೀಲತೆಗೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿದರು. ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಹಿಂದಿನ ಕಾಲದ ತಂತ್ರಜ್ಞಾನದ ಬಗ್ಗೆ ಅರಿವು ಮೂಡುತ್ತದೆ. ಅಲ್ಲದೆ, ಅವರು ನಿರ್ದೇಶಿಸಿದ ಮೊದಲ ಸಿನಿಮಾಗೆ ಅವರಿಗೆ ಬಂಗಾರದ ಪದಕವನ್ನು ನೀಡಲಾಯಿತು ಎಂದು ಹೇಳಿದರು.


 ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News